ಕಾರವಾರ: ಭಾನುವಾರದ ಸಂತೆಗೆ ಆಗಮಿಸಿದ್ದ ವ್ಯಾಪಾರಿಯೊಬ್ಬ ತರಕಾರಿ ಮೇಲೆ ಎಂಜಿಲು ಉಗಿದು ನೀರು ಚುಮುಕಿಸಿದ ದೃಶ್ಯವಾಳಿಗಳನ್ನು ಗ್ರಾಹಕ ಮುರುಳಿದರ್ ಗೋವೆಕರ್ ತಮ್ಮ ಮೊಬೈಲ್’ನಲ್ಲಿ ಸೆರೆ ಹಿಡಿದಿದ್ದಾರೆ. ಮುರುಳಿದರ್ ಅವರ ದೂರಿನ ಮೇರೆ ಪೊಲೀಸರು ತರಕಾರಿ ವ್ಯಾಪಾರಿ ಅಬ್ದುಲ್ ಹಸನ್ ಸಾಬ್ ರಜಾಕ್’ನನ್ನು ಬಂಧಿಸಿ ಜೈಲಿನ ದಾರಿ ತೋರಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಬ್ದುಲ್ ಹಸನ್ ಸಾಬ್ ರಜಾಕ್ ಪ್ರತಿ ವಾರ ತರಕಾರಿ ವ್ಯಾಪಾರಕ್ಕಾಗಿ ಉತ್ತರ ಕನ್ನಡ ಜಿಲ್ಲೆಗೆ ಬರುತ್ತಿದ್ದ. ತರಕಾರಿಗಳಿಗೆ ತನ್ನ ಎಂಜಿಲ ಜೊತೆ ನೀರು ಸಿಂಪಡಿಸುವುದು ಆತನಿಗೆ ಹೊಸದಾಗಿರಲಿಲ್ಲ. ತನ್ನ ಎಂಜಿಲನ್ನು ಊರಿನ ಎಲ್ಲರಿಗೂ ಉಣಿಸುವ ಚಿಂತನೆಯಲ್ಲಿದ್ದ ಅಬ್ದುಲ್ ಹಸನ್ ಸಾಬ್ ರಜಾಕ್ ಪ್ರತಿ ವಾರವೂ ತರಕಾರಿ ಮಾರಾಟಕ್ಕೆ ಬರುತ್ತಿದ್ದ. ಕಳೆದ ಭಾನುವಾರವೇ ಈತನ ಕೃತ್ಯವನ್ನು ಗಮನಿಸಿದ್ದ ಮುರುಳಿದರ್ ಅವರು ನ 10ರಂದು ಆತ ತರಕಾರಿಗೆ ಉಗುಳುತ್ತಿದ್ದಾಗ ಅದನ್ನು ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.
ಎರಡು ಧರ್ಮಿಯರ ನಡುವೆ ದ್ವೇಷ ಹುಟ್ಟಿಸುವ ಕಾರಣದಿಂದ ತರಕಾರಿ ವ್ಯಾಪಾರಿ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಎಂಜುಲು ಉಗುಳಿದ ತರಕಾರಿ ಸೇವನೆಯಿಂದ ರೋಗ ಹರಡುವ ಆತಂಕದ ಹಿನ್ನಲೆ ನಗರಸಭೆಯವರು ಆತ ತಂದಿದ್ದ ತರಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಆತನ ನೀಚ ಕೃತ್ಯದ ವಿಡಿಯೋ ಎಲ್ಲಡೆ ವೈರಲ್ ಆಗಿದ್ದರಿಂದ ಜನ ಸಹ ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡರು. ದೊಂಬಿ ನಡೆಸುವ ಉದ್ದೇಶ ಹೊಂದಿದ ಕಾರಣ ಆತ ಈ ಕೃತ್ಯ ಎಸಗಿರುವ ಬಗ್ಗೆ ಮುರುಳಿದರ್ ಗೋವೆಕರ್ ಪೊಲೀಸ್ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಅಬ್ದುಲ್ಲನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದರು.
ನೀವು ಖರೀದಿಸಿದ ತರಕಾರಿಯನ್ನು ತೊಳೆದು ಉಪಯೋಗಿಸಿ. ಮನೆಯಲ್ಲಿಯೇ ತರಕಾರಿ ಬೆಳೆಯುವುದು ಇನ್ನೂ ಉತ್ತಮ
ವ್ಯಾಪಾರಕ್ಕೆ ತಂದ ತರಕಾರಿ ಮೇಲೆ ಎಂಜಲು ಉಗಿದ ಅಬ್ದುಲ್ಲನ ವಿಡಿಯೋ ಇಲ್ಲಿ ನೋಡಿ..