ಯಲ್ಲಾಪುರ: ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ ಜಿ ಎನ್ ಹೆಗಡೆ ಹಿರೇಸರ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ಕಾನ್ಸರ್ ರೋಗ ಪೀಡಿತರಿಗೆ ಆರ್ಥಿಕ ನೆರವು ನೀಡಲಿದೆ.
20 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಹಕಾರಿ ಸಂಸ್ಥೆ ಈ ಬಾರಿ ಮೂರು ಹಂತದಲ್ಲಿ ದ್ವಿಶತಮಾನವನ್ನು ಆಚರಿಸಲಿದೆ. ಸೆ 23ರಂದು ಮಧ್ಯಾಹ್ನ 3 ಗಂಟೆಗೆ 21ನೇ ಉಮಚಗಿ ಪ್ರಧಾನ ಕಚೇರಿಯ ಆವಾರದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಹಾಗೂ ಸರ್ವಸಾಧಾರಣ ಸಭೆ ನಡೆಯಲಿದೆ. ಈ ವೇದಿಕೆಯಲ್ಲಿ ಕಾನ್ಸರ್ ಪೀಡಿತರಿಗೆ ನೆರವು ನೀಡಲು ಉದ್ದೇಶಿಸಲಾಗಿದೆ.
`ಕಳೆದ ವರ್ಷ ಸಂಘಕ್ಕೆ 30 ಲಕ್ಷ ರೂ ಲಾಭವಾಗಿದ್ದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆಯನ್ನು ಈ ವರ್ಷವೂ ಮುಂದುವರೆಸಲಾಗಿದೆ. ಇದರೊಂದಿಗೆ ವಿವಿಧ ಬಗೆಯ ವಿಮೆ, ಸಾರಿಗೆ, ಇ-ಸ್ಟಾಂಪಿoಗ್ ಸೇವೆ ಅಚ್ಚುಕಟ್ಟಾಗಿ ನಡೆಯುತ್ತಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ಜಿ ಎನ್ ಹೆಗಡೆ ಹಿರೇಸರ್ ಸುದ್ದಿಗಾರರಿಗೆ ಮಾಹಿತಿ ನೀಡಿದರು. `ಈ ಹಿಂದೆ ಸಹ ಕಾನ್ಸರ್ ಪೀಡಿತರಿಗೆ ಸಂಘ ನೆರವು ನೀಡಿದೆ. ಬ್ಯಾಂಕಿನ ಸದಸ್ಯರಾಗಿದ್ದು, ಕಾನ್ಸರ್ ರೋಗದಿಂದ ಬಳಲುತ್ತಿದ್ದರೆ ಅವರು ಈ ನೆರವು ಪಡೆಯಲು ಅರ್ಹರು’ ಎಂದು ಆಡಳಿತ ಮಂಡಳಿಯವರು ವಿವರಿಸಿದರು.
`ಈ ವರ್ಷ ಹೊಸದಾಗಿ ಅಡಿಕೆ ದಲ್ಲಾಲಿ ಕಾರ್ಯ ಶುರು ಮಾಡಲು ಸಂಘ ನಿರ್ಧರಿಸಿದೆ’ ಎಂದರು. ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ಟ,ನಿರ್ದೇಶಕರಾದ ಆರ್ ಎಲ್ ಭಟ್ಟ, ರವಿ ಹೆಗಡೆ ಹೀರೇಸರ, ವನರಾಗ ಶರ್ಮಾ, ನರಸಿಂಹ ಭಟ್ಟ, ಮಂಜುನಾಥ ಗುಮ್ಮಾನಿ, ಶಾಖಾ ಅಧ್ಯಕ್ಷ ಕೃಷ್ಣ ಭಟ್ಟ ಅಗ್ಗಾಶಿಮನೆ, ಶಾಖಾ ವ್ಯವಸ್ಥಾಪಕ ನೇತ್ರಾನಂದ ಮರಾಠಿ, ಗೌರವ ಸಲಹೆಗಾರ ಜಿ ಕೆ ಹೆಗಡೆ, ಸಿಬ್ಬಂದ್ದಿ ಸಿ ಎಸ್ ಪತ್ರೆಕರ್, ಜಿ ಎಸ್ ಹೆಗಡೆ, ರಘುವೀರ ಭಟ್ಟ, ಸಿಂಚನಾ ಭಾಗ್ವತ್ ಇದ್ದರು.