ಮಹಾರಾಷ್ಟದಿoದ ಭಟ್ಕಳದ ಕಸಾಯಿಖಾನೆಗಳಿಗೆ ಬರುತ್ತಿದ್ದ 13 ಜಾನುವಾರುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಬಳಿ ಲಾರಿ ತಡೆಹಿಡಿದ ಪೊಲೀಸರಿಗೆ ರಾಜಾರೋಷವಾಗಿ ಸಾಗಿಸುತ್ತಿದ್ದ ಜಾನುವಾರುಗಳು ಕಾಣಿಸಿದೆ. ದಾಖಲೆ ಪ್ರಶ್ನಿಸಿದಾಗ ಆ ಲಾರಿಯಲ್ಲಿದ್ದವರ ಬಳಿ ಯಾವ ಕಾಗದ ಪತ್ರಗಳು ಇರಲಿಲ್ಲ. ಹೀಗಾಗಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದು, ಉಳಿದ ಮೂವರು ಓಡಿ ತಪ್ಪಿಸಿಕೊಂಡಿದ್ದಾರೆ.
ಆ ಲಾರಿಯಲ್ಲಿ 9 ಎತ್ತು ಮತ್ತು 4 ಕೋಣಗಳಿದ್ದವು. ಪಾಲೆಗಾಂವ್’ನಿoದ ಅವು ಭಟ್ಕಳಕ್ಕೆ ಬರುತ್ತಿತ್ತು. ಸದ್ಯ ಔರಂಗಾಬಾದ್ ಜಿಲ್ಲೆಯ ಜಮೀಲ್ ಯೂಸುಫ್ ಶೇಖ್ (49) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹಿಂದು ಜಾಗರಣಾ ವೇದಿಕೆಯವರು ನೀಡಿದ ಮಾಹಿತಿ ಅನ್ವಯ ಡಿವೈಎಸ್ಪಿ ಮಹೇಶ ಕೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪಿಎಸೈ ರನ್ನ ಗೌಡ ಪಾಟೀಲ ಮತ್ತು ಭರ್ಮಪ್ಪ ಬೆಳಗಲಿ ನೇತೃತ್ವದಲ್ಲಿ ಎಎಸ್ಐ ಕೃಷ್ಣಾನಂದ ನಾಯ್ಕ, ಪೊಲೀಸ್ ಸಿಬ್ಬಂದಿ ಬಸವರಾಜ ಡಿ ಕೆ, ಮೋಹನ ಕಬ್ಬೇರ, ವೀರಣ್ಣ ಬಳ್ಳಾರಿ, ಲೋಹಿತ್ ಕುಮಾರ ಎಂ ಪಿ., ಅಂಬರೀಶ ಕುಂಬಾರಿ, ಕಿರಣ ತಿಳಗಂಜಿ ಲಾರಿಯನ್ನು ಅಡ್ಡ ಹಾಕಿದರು.
ಹಿಂದು ಜಾಗರಣಾ ವೇದಿಕೆ ಸಹ ಸಂಚಾಲಕರಾದ ನಾಗೇಶ ನಾಯ್ಕ ಹೊನ್ನೆಗದ್ದೆ, ಕುಮಾರ ನಾಯ್ಕ ಹನುಮಾನನಗರ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮೂಡಭಟ್ಕಳ, ಲೋಕೇಶ ದೇವಾಡಿಗ ಸಹ ಸ್ಥಳದಲ್ಲಿದ್ದರು.