6

ಕಾಂಗ್ರೆಸ್ ನಾಯಕನನ್ನು ಹೊಗಳಿದ ಬಿಜೆಪಿ ಸಂಸದ!

“ಡಾ ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಲು ಯೋಗ್ಯ ವ್ಯಕ್ತಿ. ಕಾಂಗ್ರೆಸ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು” ಎಂದು ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಯಲ್ಲಾಪುರದ ಜನರಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು “ರಾಜ್ಯ ಕಾಂಗ್ರೆಸ್ಸಿನಲ್ಲಿ ನಾಯಕತ್ವ ಬದಲಾವಣೆ ಆಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದುರಾಡಳಿತದಿಂದ ರಾಜ್ಯದ ನೆಮ್ಮದಿ ಹಾಳಾಗಿದೆ. ಈ ಸಮಯದಲ್ಲಿ ಅವರ ರಾಜೀನಾಮೆಗೆ ಆಗ್ರಹಿಸಿದರೆ ಅನಗತ್ಯ ಚುನಾವಣೆ ಎದುರಿಸಬೇಕಾಗುತ್ತದೆ. ಹೀಗಾಗಿ ಇದೀಗ ನಾಯಕತ್ವ ಬದಲಾವಣೆ ಒಂದೇ ದಾರಿ” ಎಂದರು. “ಡಾ ಪರಮೇಶ್ವರ್ ಅವರು ಒಳ್ಳೆಯ ವ್ಯಕ್ತಿ. ಈಗಿನ ಮುಖ್ಯಮಂತ್ರಿಗಳಿಗಿoತ ಅವರು ಮುಖ್ಯಮಂತ್ರಿ ಆಗುವುದು ಲೇಸು” ಎಂದರು.
“ಕಳೆದ ಹತ್ತು ವರ್ಷದ ಮೋದಿ ಪ್ರಯತ್ನದಿಂದ ಈ ಚುನಾವಣೆ ಜನರ ವಿಶ್ವಾಸಗಳಿಸಿತು. ಇದರಿಂದಲೇ ದಾಖಲೆ ಪ್ರಮಾಣದಲ್ಲಿ ಜನ ಮತದಾನ ಮಾಡಿದ್ದಾರೆ. ಬಿಜೆಪಿ ನಂಬಿದ ಮತದಾರರಿಗೆ ಎಂದಿಗೂ ಅನ್ಯಾಯವಾಗಲ್ಲ” ಎಂದರು. “ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ 67ರಷ್ಟು ಬಿಜೆಪಿ ಪಾಲಾಗಿದೆ. ಇದಕ್ಕೆ ಕಾರ್ಯಕರ್ತರ ಶ್ರಮವೇ ಕಾರಣ” ಎಂದರು. “ಕಾಂಗ್ರೆಸ್ ಶಾಸಕರಿರುವ ಕಡೆ ಸಹ ಬಿಜೆಪಿ ಅತ್ಯಂತ ಅಂತರದಿAದ ಮುನ್ನಡೆ ಸಾಧಿಸಿದೆ. ಯಲ್ಲಾಪುರದಲ್ಲಿ ಸಹ ಕಾಂಗ್ರೆಸ್ ಪರವಾಗಿ ಅಧಿಕೃತ ಕೆಲಸ ಮಾಡಿದ ಶಾಸಕರಿದ್ದರೂ ಬಾರೀ ಅಂತರದ ಮತ ಬಿಜೆಪಿಗೆ ಬಿದ್ದಿದೆ” ಎಂದರು.

  • Related Posts

    ‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ

    Share this… Facebook Pinterest Twitter Linkedin Whatsappಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಫೇಕ್ ಮತದಾರರ ರಕ್ಷಣೆಗೆ ಮಾಡಿರುವ ಕುತಂತ್ರ:ಬಸವರಾಜ ಬೊಮ್ಮಾಯಿ ಕಾನೂನಿನಡಿಯಲ್ಲಿ ಕೆಲಸ ಮಾಡುವವರಿಗೆ ಚುನಾವಣಾ ಆಯೋಗ ರಕ್ಷಣೆ ಕೊಡಬೇಕು:ಬಸವರಾಜ ಬೊಮ್ಮಾಯಿ ಬೆಂಗಳೂರು:ಚುನಾವಣೆ ಆಯೋಗದ ಕಚೇರಿ ಮುಂದೆ ಮುಖ್ಯಮಂತ್ರಿಗಳು…

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    Leave a Reply

    Your email address will not be published. Required fields are marked *

    You cannot copy content of this page