6

25 ವರ್ಷದ ನಂತರ ಗೋಕರ್ಣ ಪ್ರವೇಶಿಸಿದ ಗೃಹ ಸಚಿವ!

ಪೂರ್ವ ನಿಗದಿತ ಕಾರ್ಯಕ್ರಮದಂತೆ ಬುಧವಾರ ಗೃಹ ಸಚಿವ ಜಿ ಪರಮೇಶ್ವರ್ ಅವರು ಗೋಕರ್ಣಕ್ಕೆ ಭೇಟಿ ನೀಡಿದ್ದಾರೆ. `ಆತ್ಮಲಿಂಗ ದರ್ಶನ ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ನನಗೆ ಆ ಭಾಗ್ಯ ಸಿಕ್ಕಿದ್ದು, ನಾಡಿನ ಒಳತಿಗಾಗಿ ಪ್ರಾರ್ಥಿಸಿದ್ದೇನೆ’ ಎಂದವರು ಹೇಳಿದ್ದಾರೆ.

`ಗೋಕರ್ಣ ಅತ್ಯಂತ ಐತಿಹಾಸಿಕ ಕ್ಷೇತ್ರ. 25 ವರ್ಷಗಳ ಹಿಂದೆ ಒಮ್ಮೆ ಇಲ್ಲಿ ಬಂದಿದ್ದೆ. ಈಗಲೂ ಆತ್ಮಲಿಂಗ ದರ್ಶನ ಮಾಡಿ, ಒಳತು ಮಾಡು ಎಂದು ಬೇಡಿಕೊಂಡಿದ್ದೇನೆ’ ಎಂದರು. `ಇಲಾಖೆಯ ಕಾರ್ಯ ಚಟುವಟಿಕೆಗಳು ಹಾಗೂ ಕಾನೂನು ಸುವ್ಯವಸ್ಥೆಯ ವಿಚಾರ ಚರ್ಚೆ ಮಾಡಲು ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಸಭೆ ನಡೆಸುವೆ’ ಎಂದವರು ಮಾಧ್ಯಮಗಳಿಗೆ ತಿಳಿಸಿದರು.

ದೇವಾಲಯದಲ್ಲಿ ಬೇಡ ರಾಜಕೀಯ ವಿಷಯ!
`ದೇವಾಲಯದ ಆವರಣದಲ್ಲಿ ರಾಜಕೀಯ ವಿಷಯಗಳ ಪ್ರಶ್ನೆ ಕೇಳಬೇಡಿ’ ಎಂದು ಮನವಿ ಮಾಡಿದರು. ಅದಾಗಿಯೂ ರಾಜ್ಯ ರಾಜಕಾರಣದಲ್ಲಿ ಕೋಲಾಹಲವೆಬ್ಬಿಸಿದ ಹನಿಟ್ರಾಪ್ ಹಾಗೂ ಶಾಸಕರ ಅಮಾನತು ಕುರಿತು ಅವರು ಉತ್ತರಿಸಿದರು.

`ಸದನ ನಡೆಸುವ ಸಭಾಧ್ಯಕ್ಷರಿಗೆ ಎಲ್ಲವೂ ಗೊತ್ತಿದೆ. ಅವರು ಶಾಸಕರ ಅಮಾನತು ಮಾಡಿದ್ದು, ಅವರ ನಿರ್ಣಯವನ್ನು ನಾವು ಪ್ರಶ್ನಿಸುವುದಿಲ್ಲ. ಸಭಾಧ್ಯಕ್ಷರ ನಿರ್ಣಯವನ್ನು ಗೌರವಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

`ಹನಿಟ್ರಾಪ್ ವಿಷಯವಾಗಿ ರಾಜಣ್ಣ ಅವರು ದೂರು ನೀಡಿಲ್ಲ. ಅವರು ನನಗೆ ಮನವಿ ನೀಡಿದ್ದಾರೆ. `ಕಾನೂನಿನ ಪ್ರಕಾರ ಅವರು ನನಗೆ ಮನವಿ ನೀಡಬಹುದೇ ವಿನ: ದೂರು ನೀಡಲು ಬರುವುದಿಲ್ಲ. ದೂರು ನೀಡುವುದಾದರೆ ಪೊಲೀಸ್ ಠಾಣೆಗೆ ದೂರು ಕೊಡಬೇಕು. ಅವರು ಕೊಟ್ಟ ಮನವಿಯನ್ನು ಕಾನೂನಿನ ಚೌಕಟ್ಟಿನ ಅಡಿ ಪರಿಶೀಲಿಸುವೆ’ ಎಂದು ಹೇಳಿದರು.

  • Related Posts

    ‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ

    Share this… Facebook Pinterest Twitter Linkedin Whatsappಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಫೇಕ್ ಮತದಾರರ ರಕ್ಷಣೆಗೆ ಮಾಡಿರುವ ಕುತಂತ್ರ:ಬಸವರಾಜ ಬೊಮ್ಮಾಯಿ ಕಾನೂನಿನಡಿಯಲ್ಲಿ ಕೆಲಸ ಮಾಡುವವರಿಗೆ ಚುನಾವಣಾ ಆಯೋಗ ರಕ್ಷಣೆ ಕೊಡಬೇಕು:ಬಸವರಾಜ ಬೊಮ್ಮಾಯಿ ಬೆಂಗಳೂರು:ಚುನಾವಣೆ ಆಯೋಗದ ಕಚೇರಿ ಮುಂದೆ ಮುಖ್ಯಮಂತ್ರಿಗಳು…

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    You cannot copy content of this page