6

Municipal elections | 25 ಲಕ್ಷಕ್ಕೆ ಅಧ್ಯಕ್ಷ ಸ್ಥಾನ: ದಾಖಲೆ ಇಲ್ಲದೇ ಮಾತನಾಡಿದಕ್ಕೆ ದಾಖಲಾದ ದೂರು!

`ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನ 25-30 ಲಕ್ಷ ರೂಪಾಯಿಗೆ ( Municipal elections ) ಹರಾಜಾಗಿದೆ’ ಎಂಬ ಅರ್ಥದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿಕೆ ನೀಡಿದ್ದಾರೆ.  ಈ ಹೇಳಿಕೆ ಅಲ್ಲಗಳೆದಿರುವ ಕಾರವಾರ ಶಾಸಕ ಸತೀಶ್ ಸೈಲ್ ದಾಖಲೆ ಇಲ್ಲದೇ ಆರೋಪ ಮಾಡಿದ ಕಾರಣ ರೂಪಾಲಿ ನಾಯ್ಕ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. S news ಡಿಜಿಟಲ್

ಬುಧವಾರ ಕಾರವಾರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ( Municipal elections ) ಚುನಾವಣಾ ಮತದಾನಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗಮಿಸಿದ್ದರು. ಆದರೆ, ಪೊಲೀಸರು ಅವರ ವಾಹನವನ್ನು ಒಳಗೆ ಬಿಡಲಿಲ್ಲ. ಈ ನಡುವೆ ಶಾಸಕ ಸತೀಶ್ ಸೈಲ್ ಆಗಮಿಸಿದ್ದು, ಅವರ ವಾಹನಕ್ಕೆ ಒಳ ಪ್ರವೇಶ ನೀಡಿದಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ತಕರಾರು ತೆಗೆದರು. ಈ ವೇಳೆ ಎರಡು ಪಕ್ಷದವರ ನಡುವೆ ಗಲಾಟೆ ನಡೆದಿದ್ದು, `ಕಾಂಗ್ರೆಸ್ಸಿಗರು ನಗರಸಭೆ ಸದಸ್ಯರನ್ನು ಖರೀದಿ ಮಾಡಿದ್ದು 25-30 ಲಕ್ಷ ರೂಪಾಯಿಗೆ ವ್ಯವಹಾರ ಕುದುರಿದೆ’ ಎಂದು ರೂಪಾಲಿ ನಾಯ್ಕ ಆರೋಪಿಸಿದರು.

ಮತದಾನ ಮಾಡಿ ಹೊರಬಂದ ಸತೀಶ್ ಸೈಲ್ `ಕೆಲ ಸದಸ್ಯರು ನಮ್ಮೊಂದಿಗೆ ಬಂದಿದ್ದು, ನಾವೇ ಬೇಡ ಎಂದು ಬಿಟ್ಟಿದ್ದೇವೆ’ ಎಂದು ಹೇಳಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ `ರಾಜು ತಾಂಡೇಲ್ ವಿಷಯದಲ್ಲಿ ಸಹ ರೂಪಾಲಿ ನಾಯ್ಕ ಹಗುರುವಾಗಿ ಮಾತನಾಡಿದ್ದರಿಂದ ದೂರು ನೀಡಿದ್ದೇವೆ’ ಎಂದರು. ಶೆಂಬು ಶೆಟ್ಟಿ ಹಾಗೂ ಮಾಧವ ನಾಯಕ ಮಾತನಾಡಿ `ರೂಪಾಲಿ ನಾಯ್ಕ ಶಾಸಕರಾಗಿದ್ದಾಗ ಸಹ ಈ ರೀತಿ ಹೇಳಿಕೆ ನೀಡಿದ್ದರು. ಶಾಸಕ ಸತೀಶ್ ಸೈಲ್ ವಿರುದ್ಧ ಕುತಂತ್ರ ನಡೆದಿದೆ’ ಎಂದು ದೂರಿದರು.

S news ಡಿಜಿಟಲ್

  • Related Posts

    ‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ

    Share this… Facebook Pinterest Twitter Linkedin Whatsappಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಫೇಕ್ ಮತದಾರರ ರಕ್ಷಣೆಗೆ ಮಾಡಿರುವ ಕುತಂತ್ರ:ಬಸವರಾಜ ಬೊಮ್ಮಾಯಿ ಕಾನೂನಿನಡಿಯಲ್ಲಿ ಕೆಲಸ ಮಾಡುವವರಿಗೆ ಚುನಾವಣಾ ಆಯೋಗ ರಕ್ಷಣೆ ಕೊಡಬೇಕು:ಬಸವರಾಜ ಬೊಮ್ಮಾಯಿ ಬೆಂಗಳೂರು:ಚುನಾವಣೆ ಆಯೋಗದ ಕಚೇರಿ ಮುಂದೆ ಮುಖ್ಯಮಂತ್ರಿಗಳು…

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    Leave a Reply

    Your email address will not be published. Required fields are marked *

    You cannot copy content of this page