6

Karwar | ಛೇ! ಇವರೆಂಥ ನಾಯಕರು… ಅಧಿಕಾರಕ್ಕೆ ಬಂದು 3 ದಿನ ಕಳೆದಲ್ಲ, ಆಗಲೆ ಶುರುವಾಯ್ತು ಬೀದಿ ಜಗಳ!

ಮೊನ್ನೆ ನಗರಸಭೆ ಚುನಾವಣೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಜಗಳವಾಡಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಗರು ಶುಕ್ರವಾರ ಕಾರವಾರದ ( Karwar ) ಗಾಂಧಿ ಮಾರುಕಟ್ಟೆಯಲ್ಲಿನ ಮಣ್ಣು ತೆರವು ವಿಷಯವಾಗಿ ಕಚ್ಚಾಟ ನಡೆಸಿದ್ದಾರೆ. ನಗರಸಭೆಯ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಶುರುವಾದ ಮಾತಿನ ಚಕಮಕಿ ಈ ಎರಡು ಬಣದ ಬೆಂಬಲಿಗರ ನಡುವಿನ ದ್ವೇಷ ರಾಜಕಾರಣಕ್ಕೆ ಕಾರಣವಾಗಿದೆ.

ಕಾರವಾರ ( Karwar ) ನಗರದ ಗಾಂಧಿ ಮಾರುಕಟ್ಟೆಯಲ್ಲಿನ ಹಳೆಯದಾಗಿದ್ದ ಕಟ್ಟಡವನ್ನು 2020ರಲ್ಲಿ ತೆರವು ಮಾಡಲಾಗಿದ್ದು, ಅಲ್ಲಿನ ಮಣ್ಣನ್ನು ಬೇರೆ ಕಡೆ ಹಾಕಿರಲಿಲ್ಲ. ಇದರಿಂದ ಮಳೆಗಾಲದಲ್ಲಿ ಆ ಮಣ್ಣು ಇತರೆ ಅಂಗಡಿಗಳಿಗೆ ನುಗ್ಗುತ್ತಿತ್ತು. ಮಣ್ಣು ಗಟಾರ ತುಂಬುವುದರಿoದ ನೀರು ಹರಿಯುವಿಕೆಗೆ ಸಮಸ್ಯೆಯಾಗಿತ್ತು. ನಗರಸಭೆಯ ನೂತನ ಅಧ್ಯಕ್ಷರ ಆಯ್ಕೆ ನಂತರ ಮೊದಲ ಕೆಲಸವಾಗಿ ಮಣ್ಣು ಸ್ಥಳಾಂತರಕ್ಕೆ ಯೋಜನೆ ರೂಪಿಸಲಾಗಿದ್ದು, ಇದೇ ವಿಷಯ ಜಗಳಕ್ಕೆ ಕಾರಣವಾಗಿದೆ. ನಗರದ ಮದ್ಯಭಾಗದಲ್ಲಿ ನಡೆದ ಜಗಳ ನೋಡಲು ನೂರಾರು ಜನ ಆಗಮಿಸಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ನಗರಸಭೆಯಲ್ಲಿ ಯಾವುದೇ ಠರಾವು ಆಗದೇ ಮಣ್ಣು ಸ್ಥಳಾಂತರ ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. ಸಾಕಷ್ಟು ವಾಗ್ವಾದದ ನಂತರವೂ ಈ ವಿಷಯ ಬಗೆಹರಿಯಲಿಲ್ಲ. ಹೀಗಾಗಿ ಅರ್ದಕ್ಕೆ ಮಣ್ಣು ತೆರವು ಕಾರ್ಯ ನಿಲ್ಲಿಸಲಾಯಿತು.

  • Related Posts

    ‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ

    Share this… Facebook Pinterest Twitter Linkedin Whatsappಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಫೇಕ್ ಮತದಾರರ ರಕ್ಷಣೆಗೆ ಮಾಡಿರುವ ಕುತಂತ್ರ:ಬಸವರಾಜ ಬೊಮ್ಮಾಯಿ ಕಾನೂನಿನಡಿಯಲ್ಲಿ ಕೆಲಸ ಮಾಡುವವರಿಗೆ ಚುನಾವಣಾ ಆಯೋಗ ರಕ್ಷಣೆ ಕೊಡಬೇಕು:ಬಸವರಾಜ ಬೊಮ್ಮಾಯಿ ಬೆಂಗಳೂರು:ಚುನಾವಣೆ ಆಯೋಗದ ಕಚೇರಿ ಮುಂದೆ ಮುಖ್ಯಮಂತ್ರಿಗಳು…

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    Leave a Reply

    Your email address will not be published. Required fields are marked *

    You cannot copy content of this page