6

ಉತ್ತರ ಕನ್ನಡ ಬಿಜೆಪಿಗೆ ಶಾಸಕರೆಷ್ಟು? ಲೆಕ್ಕ ತಪ್ಪದ ಕಾಗೇರಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ಒಬ್ಬರು ಮಾತ್ರ ಶಾಸಕರಿದ್ದಾರೆ. ಅವರು ದಿನಕರ ಶೆಟ್ಟಿ ಮಾತ್ರ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಬುಧವಾರ ಹೊನ್ನಾವರದಲ್ಲಿ ಈ ಮಾತು ಹೇಳಿದ್ದ ಅವರು ಗುರುವಾರ ಯಲ್ಲಾಪುರದಲ್ಲಿ ಮಾಧ್ಯಮದವರ ಮುಂದೆ ಅದನ್ನು ಪುನರುಚ್ಚರಿಸಿದರು. ಆ ಮೂಲಕ ಶಿವರಾಮ ಹೆಬ್ಬಾರ್ ಬಿಜೆಪಿಗರಲ್ಲ ಎಂದು ಅವರು ಪರೋಕ್ಷವಾಗಿ ಹೇಳಿದರು. `ನಿಮಗೂ ನಮಗೂ ಗೊತ್ತಿರುವ ಸತ್ಯ ಹೇಳಿದ್ದೇನೆ. ಎಲ್ಲರಿಗೂ ಅದು ಗೊತ್ತಿರುವ ವಿಷಯ’ ನಿಮಗೆ ಗೊತ್ತಿಲ್ಲವಾ?’ ಎಂದು ಮರುಪ್ರಶ್ನೆ ಹಾಕಿದರು.

ಇದಕ್ಕೂ ಮುನ್ನ `ಎಲ್ಲಾ ಕಾರ್ಯಕರ್ತರು ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಆಸಕ್ತಿವಹಿಸಬೇಕು. ಮಿಸ್ಡಕಾಲ್ ಕೊಡುವ ಮೂಲಕವೂ ಬಿಜೆಪಿ ಸದಸ್ಯತ್ವ ಪಡೆಯುವ ಅವಕಾಶವಿದ್ದು, 18 ವರ್ಷ ಮೇಲ್ಪಟ್ಟವರಿಂದ ಹಿಡಿದು ವೃದ್ಧವರೆಗೆ ಎಲ್ಲರಿಗೂ ಇಲ್ಲಿ ಸ್ವಾಗತವಿದೆ’ ಎಂದರು. ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪಕ್ಷದ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಪ್ರಮುಖರಾದ ಜಿ ಎನ್ ಗಾಂವ್ಕರ್ ಇನ್ನಿತರರು ಇಡೀ ದಿನ ಕಾಗೇರಿ ಅವರ ಜೊತೆಗಿದ್ದು ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

 

  • Related Posts

    ‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ

    Share this… Facebook Pinterest Twitter Linkedin Whatsappಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಫೇಕ್ ಮತದಾರರ ರಕ್ಷಣೆಗೆ ಮಾಡಿರುವ ಕುತಂತ್ರ:ಬಸವರಾಜ ಬೊಮ್ಮಾಯಿ ಕಾನೂನಿನಡಿಯಲ್ಲಿ ಕೆಲಸ ಮಾಡುವವರಿಗೆ ಚುನಾವಣಾ ಆಯೋಗ ರಕ್ಷಣೆ ಕೊಡಬೇಕು:ಬಸವರಾಜ ಬೊಮ್ಮಾಯಿ ಬೆಂಗಳೂರು:ಚುನಾವಣೆ ಆಯೋಗದ ಕಚೇರಿ ಮುಂದೆ ಮುಖ್ಯಮಂತ್ರಿಗಳು…

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    You cannot copy content of this page