ಕಾರವಾರ: ಮದುವೆ ವೇಳೆ ಉಡುಗರೆಯಾಗಿ ದೊರೆತ ಪತ್ನಿ ತವರು ಮನೆ ಆಸ್ತಿಗಾಗಿ ಅಳಿಯರ ನಡುವೆ ಹೊಡೆದಾಟ ನಡೆದಿದೆ.
ಲಕ್ಷ್ಮಣ ಪುರುಷೋತ್ತಮ ಮಾಳಸೆಕರ ಹಾಗೂ ದೀಪಕ ಮಾಯೇಕರ್ ಹೊಡೆದಾಡುಕೊಂಡ ಪ್ರಕರಣ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಲಕ್ಷ್ಮಣ ಮಾಳಸೆಕರ್ ಅವರು ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಾರೆ. ಸದಾಶಿವಗಡದ ಹೋಟೆಗಾಳಿಯವರಾದ ಅವರು ಮದುವೆ ನಂತರ ನಗರಕ್ಕೆ ಬಂದು ವಾಸವಾಗಿದ್ದಾರೆ. 63 ವರ್ಷದ ಅವರು 30 ವರ್ಷಗಳಿಂದಲೂ ಮಾವ ಕೊಟ್ಟ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ.
ನ 8ರಂದು ಲಕ್ಷ್ಮಣ ಪುರುಷೋತ್ತಮ ಮಾಳಸೆಕರ ಅವರ ಪತ್ನಿಯ ತಂಗಿ ಗಂಡ ದೀಪಕ ಮಾಯೇಕರ್ ಜಾಗದ ವಿಷಯದಲ್ಲಿ ತಕರಾರು ತೆಗೆದಿದ್ದಾರೆ. `ಈ ಜಾಗ ನಿನ್ನದಲ್ಲ’ ಎಂದು ಹೇಳಿ ಮುಖದ ಮೇಲೆ ಗುದ್ದಿದ್ದಾರೆ. ಆಸ್ಪತ್ರೆಗೆ ದಾಖಲಾದ ಲಕ್ಷö್ಮಣ ಮಾಳಸೆಕರ್ ಅದೇ ದಿನ ಪೊಲೀಸ್ ದೂರು ನೀಡಿದ್ದು, ಇದೀಗ ಕೋರ್ಟಿಗೆ ಹೋಗಿ ಪ್ರಕರಣ ದಾಖಲಿಸಿದ್ದಾರೆ.