ಶಿರಸಿ: ಅರಣ್ಯದಂತಿರುವ ಪ್ರದೇಶ ವಕ್ಟ್ ಆಸ್ತಿಯಾಗಿ ಪರಿವರ್ತನೆಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದಾಖಲೆಗಳು ಹರಿದಾಡುತ್ತಿವೆ. ಕಳೆದ ಎರಡು ದಿನಗಳಿಂದ ಶಿರಸಿಯ ಅರಣ್ಯ ಜಾಗ ವಕ್ಟ್ ಆಸ್ತಿ ಎಂದು ನಮೂದಾದ ಪಹಣಿ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ಇದಕ್ಕೆ ಒಬ್ಬೊಬ್ಬರು ಒಂದೊoದು ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಶಿರಸಿ ಹಾವೇರಿ ರಾಷ್ಟ್ರೀಯ ಹೆದ್ದಾರಿ 766ಇ ಪಕ್ಕದಲ್ಲಿ ದಟ್ಟ ಅರಣ್ಯವಿದೆ. ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈ ಪ್ರದೇಶ ಸೇರುತ್ತದೆ. ಇಲ್ಲಿನ ಸರ್ವೆ ನಂ. 12 ಹಾಗೂ ಸ.ನಂ. 40ರ ಪಹಣಿ ಪರಿಶೀಲಿಸಿದರೆ ಅಲ್ಲಿ ವಕ್ಟ್ ಹೆಸರು ಕಾಣುತ್ತದೆ. ಕಾಲಂ 11ರಲ್ಲಿ ವಕ್ಟ್ ಆಸ್ತಿ ಎಂದು ಬರೆಯಲಾಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಧಾನ ಕೇಳಿಬಂದಿದೆ.
`ಈ ಜಾಗ ಹಿಂದಿನಿ0ದಲೂ ಖಬರಸ್ತಾನವಾಗಿ ಬಳಸಿಕೊಂಡು ಬರಲಾಗಿದೆ’ ಎಂಬುದು ಅಧಿಕಾರಿಗಳ ಅಭಿಪ್ರಾಯ. `ಸರ್ಕಾರಿ ಜಾಗವನ್ನು ಈ ರೀತಿ ಮಾಡಬಾರದು’ ಎಂಬುದು ಜನರ ಹಕ್ಕೊತ್ತಾಯ. ಜಾಗದ ಕಾಗದಪತ್ರಗಳನ್ನು ಪರಿಶೀಲಿಸಿದ ತಹಶೀಲ್ದಾರ್ ಶ್ರೀಧರ ಮುಂದಲಮನಿ, `ಒಟ್ಟು 7 ಎಕರೆ 28 ಗುಂಟೆ ಜಾಗವು ವಕ್ಸ್ ಮಾಲೀಕತ್ವದಲ್ಲಿದೆ’ ಎಂದು ಹೇಳಿದ್ದಾರೆ. `1991ರಲ್ಲಿಯೇ ವಕ್ಸ್ಗೆ ನೊಂದಣಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯ ಒಂದು ಪಕ್ಕದಲ್ಲಿ ಸರ್ಕಾರಿ ಕಂದಾಯ ಭೂಮಿ ಸರ್ವೆ ನಂಬರ್ 12ರಲ್ಲಿ 4.36 ಎಕರೆ ಪ್ರದೇಶ ಹಾಗೂ ಸರ್ವೆ ನಂಬರ್ 40ರಲ್ಲಿ 2.32 ಎಕರೆ ಜಾಗ ವಕ್ಸ್ ಹೆಸರಲ್ಲಿ ದಾಖಲಾಗಿದೆ’ ಎಂದವರು ಹೇಳಿದ್ದಾರೆ.
`ಇದನ್ನು ಇದೀಗ ರಾಜಕೀಯ ವಿಷಯವನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಹಲವು ಗೊಂದಲಗಳಿಗೆ ಎಡೆ ಮಾಡಬಾರದು’ ಎಂದಿದ್ದಾರೆ. ಈ ಜಾಗ 1920ರಿಂದಲೇ ಪಹಣಿಯಲ್ಲಿ ಸರ್ಕಾರಿ ಜಾಗ ಎಂದಿದೆ. ಸ ನಂ 12 ಸ್ಮಶಾನ ಹಾಗೂ ಸ ನಂ 40 ಮಸಣವಟಿ ಎಂದು ದಾಖಲೆಗಳಲ್ಲಿದೆ. ಸರ್ಕಾರಿ ಗೆಜೆಟ್ ಅನುಸಾರವಾಗಿ ಕಾಲಂ ನಂಬರ್ 11ರಲ್ಲಿ 1991ರಲ್ಲಿ ವಕ್ಸ್ ಆಸ್ತಿ ಎಂದು ನೋಂದಣಿ ಆಗಿದೆ’ ಎಂದವರು ಹೇಳಿದ್ದಾರೆ.
ಅದಾಗಿಯೂ, ಅಧಿಕಾರಿಗಳ ಈ ಮಾತು ಜನರಿಗೆ ಸಮಾದಾನ ತಂದಿಲ್ಲ. ಹೀಗಾಗಿ ವಕ್ಟ ಪಹಣಿಯ ದಾಖಲೆ ಈಗಲೂ ಎಲ್ಲಾ ಕಡೆ ಹರಿದಾಡುತ್ತಿದೆ.