ಯಲ್ಲಾಪುರ: ಮಂಚಿಕೆರೆಯ ರಾಜರಾಜೇಶ್ವರಿ ಪ್ರೌಢಶಾಲೆಯ ಮಕ್ಕಳು ಅಭಿನಯಿಸಿದ ವಿಜ್ಞಾನ ನಾಟಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ಎಂ ಕೆ ಭಟ್.ಯಡಳ್ಳಿ ಅವರು ಈ ನಾಟಕ ರಚಿಸಿದ್ದರು. ಸುಬೋಧ ಹೆಗಡೆ ಮಳಗಿಮನೆ ನಾಟಕವನ್ನು ನಿರ್ದೇಶಿಸಿದ್ದರು. ಯಲ್ಲಾಪುರದ ಹೋಲಿ ರೋಜರಿ ಶಾಲೆಯಲ್ಲಿ ತಾಲೂಕಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ನಡೆದಿದ್ದು ನಾಟಕ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದರು. ಪೃಕೃತಿ ವಿಕೋಪ ನಡೆದಾಗ ತಂತ್ರಜ್ಞಾನ ಬಳಸಿ ವಿಪತ್ತು ಬಗೆಹರಿಸುವ ಬಗ್ಗೆ ರಾಜರಾಜೇಶ್ವರಿ ಪ್ರೌಢಶಾಲಾ ಮಕ್ಕಳು ನಾಟಕವನ್ನು ಪ್ರಸ್ತುತಪಡಿಸಿದರು.
ಶಾಲೆಗೆ ಮಗು ಕಳುಹಿಸಿದ ತಾಯಿಗೆ ಗುಡುಗು ಸಿಡಿಲು ಕಾಣಿಸುತ್ತದೆ. ಶಾಲೆಗೆ ಹೋದ ಮಕ್ಕಳ ಬಗ್ಗೆ ಆಕೆಗೆ ಕಳವಳ ವ್ಯಕ್ತವಾಗುತ್ತದೆ. ಗುಡ್ಡ ಕುಸಿತ, ನದಿ ದಿಕ್ಕು ಬದಲಾವಣೆ, ಮನೆ ಶಾಲೆಗಳು ನೀರಿನಲ್ಲಿ ಮುಳುಗಿದ ಬಗ್ಗೆ ತಾಯಿ ಆತಂಕಗೊಳ್ಳುತ್ತಾಳೆ. ಆಗ ಸರ್ಕಾರ ಡ್ರೋಣ್ ಹಾಗೂ ಹೆಲಿಕಾಪ್ಟರ್ ಬಳಸಿ ಮಕ್ಕಳ ರಕ್ಷಣೆ ಮಾಡುವುದು ನಾಟಕದ ಸಾರಾಂಶ.
ಇದರೊ0ದಿಗೆ ಅರಣ್ಯಕ್ಕೆ ಬೆಂಕಿ ಬಿದ್ದಾಗ ಸೆಟ್ಲೈಟ್ ಆಧಾರಿತವಾಗಿ ಆ ವಿಷಯ ತಿಳಿದು ಕಾಡು ರಕ್ಷಿಸುವ ತಂತ್ರಜ್ಞಾನದ ಬಗ್ಗೆಯೂ ರಾಜರಾಜೇಶ್ವರಿ ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿದರು. ವಿದ್ಯಾರ್ಥಿಗಳಾದ ಪನ್ನಗ ಶಾಸ್ತ್ರಿ, ಶ್ರೀನಿಧಿ ಜೋಶಿ, ನಾಗಶ್ರೀ ಭಟ್, ಸಂಧ್ಯಾ ಭಟ್, ಸ್ನೇಹಾ ಲಕ್ಮಾಪುರ್, ತ್ರಿವೇಣಿ ಮರಾಠಿ, ಸಾತ್ವಿಕ್ ಗೌಡ, ಆದಿತ್ಯ ಶೇಟ್ ಅತ್ಯುತ್ತಮವಾಗಿ ಅಭಿನಯಿಸಿದರು.
ಪನ್ನಘ ಶಾಸ್ತ್ರಿ ವಿಜ್ಞಾನ ಆಶುಭಾಷಣ ಸ್ಪರ್ಧೆಯಲ್ಲಿ ಸಹ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಸಾಧಕ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರು ಹಾಗೂ ಪದಾಧಿಕಾರಿಗಳು ಶುಭ ಕೋರಿದರು.