ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಸಾವನಪ್ಪಿದವರು ಎಂದು ಶಂಕಿಸಲಾದವರ ಮೂಳೆಗಳೆರಡು ಸೋಮವಾರ ನದಿ ಆಳದಲ್ಲಿ ಸಿಕ್ಕಿದೆ. ಈ ಎರಡೂ ಮೂಳೆಗಳು ಮಾನವನಿಗೆ ಸೇರಿದ್ದು ಎಂದು ವೈದ್ಯರು ದೃಢಪಡಿಸಿದ್ದಾರೆ. ಆದರೆ, ಇದು ಯಾರ ಮೂಳೆ ಎಂದು ಖಚಿತವಾಗಿಲ್ಲ.
ಕೇರಳದ ಅರ್ಜುನ, ಗಂಗಾವಳಿಯ ಲೋಕೇಶ ಅಥವಾ ಜಗನ್ನಾಥ ನಾಯ್ಕ ಅವರ ಪೈಕಿ ಒಬ್ಬರ ಮೂಳೆ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ. ತಮಿಳುನಾಡಿನ ಗ್ಯಾಸ್ ಟ್ಯಾಂಕರ್ ಚಾಲಕ ಚಿನ್ನವಣ್ಣನ ಕಾಲುಗಳು ಮಾತ್ರ ಈ ಹಿಂದೆ ಬೆಳಂಬಾರದ ಬಳಿ ದೊರೆತಿದ್ದು, ಆತನ ದೇಹದ ಮೂಳೆ ಇದಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಸಿಕ್ಕ ಎರಡೂ ಮೂಳೆಗಳು ಬುಜ ಹಾಗೂ ಕೈ ಹಾಗೂ ಎದೆಭಾಗದ್ದಾಗಿದೆ. ಪ್ರಸ್ತುತ ಮೂಳೆಯನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಡಿ ಎನ್ ಎ ಪರೀಕ್ಷೆ ನಂತರ ಸಾವನಪ್ಪಿದವರ ಕುಟುಂಬಕ್ಕೆ ಅದನ್ನು ಹಸ್ತಾಂತರಿಸಲಾಗುತ್ತದೆ.
ಗoಗಾವಳಿ ನದಿಯಲ್ಲಿ ಮೂಳೆ ಸಿಕ್ಕಿರುವ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾತನಾಡಿದ್ದು, ವಿಡಿಯೋ ಇಲ್ಲಿ ನೋಡಿ..