ಕುಮಟಾ: ಐಷಾರಾಮಿ ರೆಸಾರ್ಟಿನಲ್ಲಿ ನಡೆಯುತ್ತಿದ್ದ ಸರಾಯಿ ಪಾರ್ಟಿಗೆ ಪೊಲೀಸರು ತಡೆ ಒಡ್ಡಿದ್ದಾರೆ.
ಗೋಕರ್ಣದ ದುಬ್ಬನಶಿ ಬಳಿಯ `ಲಿವಿನ್ ಹೌಸ್ ರೆಸ್ಟೊರೆಂಟ್’ನ ಮುಂದೆ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಅಲ್ಲಿ ಪ್ರಶಾಂತ ರಾಮಚಂದ್ರ ನಾಯಕ ಸರಾಯಿ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಆ ಸ್ಥಳದಲ್ಲಿ ಸರಾಯಿ ಮಾರಾಟ ಹಾಗೂ ಸೇವನೆಗೆ ಅನುಮತಿ ಇರಲಿಲ್ಲ.
ಗೋಕರ್ಣ ಪೊಲೀಸ್ ನಿರೀಕ್ಷಕ ವಸಂತ ಆಚಾರ್ ರೆಸಾರ್ಟಿನ ಸುತ್ತಲು ಸಂಚಾರ ನಡೆಸಿದರು. ಅಲ್ಲಿದ್ದ ಶೆಡ್ಡಿನಲ್ಲಿ ಅಕ್ರಮ ಸರಾಯಿ ದಂಧೆ ನಡೆಯುತ್ತಿರುವುದನ್ನು ಪತ್ತೆ ಮಾಡಿದರು. ಪೊಲೀಸ್ ತಂಡದೊoದಿಗೆ ದಾಳಿ ನಡೆಸಿ, ಅಕ್ರಮ ನಡೆಸುತ್ತಿದ್ದ ಪ್ರಶಾಂತ ರಾಮಚಂದ್ರ ನಾಯಕ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.