ಕುಮಟಾ: ಮಹಿಳೆಯರಿಬ್ಬರು ಕೂಡಿ ನಡೆಸುತ್ತಿದ್ದ ಅನಧಿಕೃತ ಮದ್ಯದಂಗಡಿಯ ಮೇಲೆ ಮಹಿಳಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 5.3ಲೀಟರ್ ಮದ್ಯ ಅಕ್ರಮವಾಗಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.
ಕತಗಾಲ್ ಬಳಿಯ ಮುರುಗೋಳಿ ಆಳಕೋಡದಲ್ಲಿ ಬೀಡಾ ಅಂಗಡಿ ನಡೆಸುವ ರೇಷ್ಮಾ ಪ್ರಥಮ ನಾಯ್ಕ (30) ಬೀಡಾ ಅಂಗಡಿ ಹಿಂದೆ ಸರಾಯಿ ವ್ಯಾಪಾರ ನಡೆಸುತ್ತಿದ್ದರು. ಆದರೆ, ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ. ಅದೇ ಊರಿನ ರಂಜನಾ ಆನಂದ ಗೋಕಲೆ (36) ಸಹ ಮದ್ಯ ವ್ಯಾಪಾರಕ್ಕೆ ಸಹಕಾರ ನೀಡಿದ್ದರು.
ನ 19ರ ಸಂಜೆ ಪೊಲೀಸ್ ಉಪನಿರೀಕ್ಷಕಿ ಸಾವಿತ್ರಿ ನಾಯಕ ಬೀಡಾ ಅಂಗಡಿ ಮೇಲೆ ದಾಳಿ ಮಾಡಿದರು. ಆಗ, ವಿವಿಧ ಬಗೆಯ ಮದ್ಯದ ಪ್ಯಾಕೇಟ್ ಸಿಕ್ಕಿದೆ. ಮದ್ಯ ಮಾರಾಟದಿಂದ ಸಂಗ್ರಹಿಸಿದ 2900ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನಧಿಕೃತ ಮದ್ಯವನ್ನು ವಶಕ್ಕೆ ಪಡೆದು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.