ಸಿದ್ದಾಪುರ: ಶಿರಸಿ-ಸಿದ್ದಾಪುರ ರಸ್ತೆಯ ಕೋಲಸಿರ್ಸಿ ಕ್ರಾಸಿನ ಬಳಿ ಅನಧಿಕೃತ ಸರಾಯಿ ಮಾರಾಟ ಮಾಡುತ್ತಿದ್ದ ಬಾಲಕೃಷ್ಣ ನಾಯ್ಕ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದು, ಪ್ರಕರಣ ದಾಖಲಾಗಿದೆ.
ಕೋಲಸಿರ್ಸಿ ಹಲಗಡಿಕೊಪ್ಪದ ಬಾಲಕೃಷ್ಣ ನಾಯ್ಕ ಡಿ 16ರ ರಾತ್ರಿ 8 ಗಂಟೆ ಅವಧಿಯಲ್ಲಿ ರಸ್ತೆ ಅಂಚಿನಲ್ಲಿ ನಿಂತು ಸರಾಯಿ ಮಾರುತ್ತಿದ್ದ. ಪೊಲೀಸ್ ಉಪನಿರೀಕ್ಷಕಿ ಗೀತಾ ಶಿರ್ಶಿಕರ್ ತಮ್ಮ ತಂಡದ ಜೊತೆ ಅದೇ ಮಾರ್ಗದಲ್ಲಿ ಹೋಗುತ್ತಿದ್ದು, ಆ ವೇಳೆ ಬಾಲಕೃಷ್ಣ ನಾಯ್ಕನ ಅಕ್ರಮವನ್ನು ತಡೆದರು.
ವಿವಿಧ ಬಗೆಯ ಮದ್ಯದ ಜೊತೆ ಖಾಲಿ ಲೋಟಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮ ಮದ್ಯ ಮಾರಾಟದಿಂದ ಆಗುವ ಅನಾಹುತಗಳ ಬಗ್ಗೆಯೂ ಪೊಲೀಸರು ಬಾಲಕೃಷ್ಣ ನಾಯ್ಕರಿಗೆ ತಿಳುವಳಿಕೆ ನೀಡಿದರು. ನಂತರ ಪ್ರಕರಣ ದಾಖಲಿಸಿಕೊಂಡರು.