ಹಿಂದು ಜನ ಜಾಗೃತಿ ವೇದಿಕೆ ಸದಸ್ಯರ ಸಹಕಾರಲ್ಲಿ ಭಟ್ಕಳ ಪೊಲೀಸರು ಅಕ್ರಮ ಜಾನುವಾರು ಸಾಗಾಟ ತಡೆದಿದ್ದಾರೆ. ಆದರೆ, 17 ಜಾನುವಾರುಗಳ ಪೈಕಿ ಎರಡು ಕೋಣ ಉಸಿರುಗಟ್ಟಿ ಸಾವನಪ್ಪಿದೆ!
15 ಜಾನುವಾರುಗಳನ್ನು ರಕ್ಷಿಸಿದ ಪೊಲೀಸರು ಅವುಗಳಿಗೆ ಮೇವು-ನೀರು ನೀಡಿ ಉಪಚರಿಸಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಅಕ್ಕಿಹಾಲೂರಿನ ಜೈನುಲ್ಲಾ ಚಮನ್ ಶಾಬ್ (28) ಹಾಗೂ ಇಮಾಮ್ ಹುಸೇನ್ ಮೌಲಾಲಿ ಶಾಬ್ ಬಂಧಿತರು.
ಯಾವುದೇ ಪರವಾನಿಗೆ ಇಲ್ಲದೇ 17 ಕೋಣಗಳನ್ನು ಅವರು ಲಾರಿಯಲ್ಲಿ ಸಾಗಿಸುತ್ತಿದ್ದರು. ಈ ಬಗ್ಗೆ ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ಜಯಂತ ನಾಯ್ಕ ಅವರಿಗೆ ಮಾಹಿತಿ ಬಂದಿತ್ತು. ಸಂಘಟನೆ ಸಹ ಸಂಚಾಲಕರಾದ ಕುಮಾರ ನಾಯ್ಕ ಹನುಮಾನನಗರ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮೂಡಭಟ್ಕಳ ಜೊತೆ ಅವರು ವಾಹನ ತಡೆದರು.
ಶಿರಾಲಿ ಬಳಿ ನಡೆದ ಕಾರ್ಯಾಚರಣೆಗೆ ಪೊಲೀಸರು ಸಹಕಾರ ನೀಡಿದ್ದು, ಕೋಣಗಳ ಬಲಿ ತಪ್ಪಿಸಿದರು. ಬಳಿಕ ವಾಹನವನ್ನು ಭಟ್ಕಳ ಗ್ರಾಮೀಣ ಠಾಣೆಗೆ ತಂದು ಆರೈಕೆ ಮಾಡಲಾಯಿತು. ಎರಡು ಕೋಣಗಳು ವಾಹನದಲ್ಲಿ ಸಾವನಪ್ಪಿರುವುದನ್ನು ನೋಡಿ ಅಲ್ಲಿದ್ದವರು ಮರುಕವ್ಯಕ್ತಪಡಿಸಿದರು. ಈ ಕಾರ್ಯಾಚರಣೆಯಲ್ಲಿ ಪಿಎಸೈ ರನ್ನ ಗೌಡ ಪಾಟೀಲ ಮತ್ತು ಭರ್ಮಪ್ಪ ಬೆಳಗಲಿ ಇದ್ದರು. ಪೊಲೀಸ್ ಸಿಬ್ಬಂದಿ ವಿನೋದ ಕುಮಾರ ರೆಡ್ಡಿ, ಮಂಜು ಖಾರ್ವಿ, ವೀರಣ್ಣ ಬಳ್ಳಾರಿ, ಕಿರಣ ತಿಲಗಂಜಿ, ಚಾಲಕ ದೇವರಾಜ ಮೊಗೇರ ಕಾರ್ಯಾಚರಣೆಗೆ ಕೈ ಜೋಡಿಸಿದ್ದರು.