ಹೊನ್ನಾವರ: ಗೇರುಸೊಪ್ಪಾದಿಂದ ಹೊನ್ನಾವರ ಕಡೆ ಬರುತ್ತಿದ್ದ ಲಾರಿಗೆ ಅಡ್ಡಲಾಗಿ ಪೊಲೀಸರು ಕೈ ಮಾಡಿದ ಪರಿಣಾಮ ಐದು ಜಾನುವಾರುಗಳ ಜೀವ ಉಳಿದಿದೆ.
ನ 27ರಂದು ಗೂಡ್ಸ ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟ ನಡೆದಿತ್ತು. ಬೆಳಗ್ಗೆ 4 ಗಂಟೆಗೆ ಪಿಎಸ್ಐ ಮಂಜುನಾಥ ಅವರು ಆ ಲಾರಿಯನ್ನು ತಡೆದರು. ಆಗ 70 ಸಾವಿರ ರೂ ಮೌಲ್ಯದ ಎರಡು ಆಕಳು, 15 ಸಾವಿರ ರೂ ಮೌಲ್ಯದ ಹೋರಿ, 90 ಸಾವಿರ ರೂ ಮೌಲ್ಯದ 2 ಎತ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಗೊತ್ತಾಯಿತು.
ಲಾರಿಯಲ್ಲಿದ್ದ ಜಾನುವಾರುಗಳಿಗೆ ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆಗಳಿರಲಿಲ್ಲ. ನೀರು ಆಹಾರವನ್ನು ಸಹ ಒದಗಿಸಿರಲಿಲ್ಲ. ಈ ಅಕ್ರಮ ಸಾಗಾಟದಲ್ಲಿ ಶಿವಮೊಗ್ಗದ ಮೂವರು ಚಾಲಕರ ಜೊತೆ ಭಟ್ಕಳದ ವ್ಯಕ್ತಿಯೊಬ್ಬ ಶಾಮೀಲಾಗಿರುವುದನ್ನು ಪೊಲೀಸರು ಪತ್ತೆ ಮಾಡಿದರು. ಜೊತೆಗೆ ಇನ್ನಿಬ್ಬರು ಕೃಷಿಕರು ಅಕ್ರಮ ಜಾನುವಾರು ಸಾಗಾಟದಲ್ಲಿದ್ದರು.
ಶಿಖಾರಿಪುರ ಅಗ್ರಹಾರದ ಚಾಲಕರಾದ ಶಿವಶಂಕರ್ ಧಾನಿಗೊಂಡ್ರ, ಸಚಿನ್ ಬಿ ಎಂ, ರಾಜು ಬೆಳಗೇರಿ, ಶಿಖಾರಿಪುರದ ಕೃಷಿಕರಾದ ಸೋಮಪ್ಪ ಗಂಟೇರ, ಕರಿಬಸಪ್ಪ ಒಂಟೇರ್ ಜೊತೆ ಭಟ್ಕಳದ ಸಯ್ಯದ್ ಅಸ್ಲಾಂ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.