ಯಲ್ಲಾಪುರ: ಸ್ವಾತಂತ್ರೋತ್ಸವದ ಅಂಗವಾಗಿ ತಟಗಾರ ಶಾಲಾ ಮಕ್ಕಳಿಗೆ ರಸಪ್ರಶ್ನೆ, ಭಾಷಣ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು.
ಧ್ವಜಾರೋಹಣ, ಸಿಹಿ ತಿಂಡಿ ವಿತರಣೆ ಜೊತೆ ವಿಭಿನ್ನವಾಗಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ ಶಾಲಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಹಂಗಾರಿ ಅತಿಥಿಗಳನ್ನು ಕರೆಯಿಸಿ ಅವರಿಂದ ಮಕ್ಕಳಿಗೆ ಅರಿವು ಮೂಡಿಸಿದರು. ಸ್ವಾತಂತ್ರೋತ್ಸವದ ಅಂಗವಾಗಿ ಅವರು ಜಾಥಾ ನಡೆಸಿದರು. ದೇಶಭಕ್ತಿ ಮೂಡಿಸುವ ಉದ್ದೇಶದಿಂದ ವಿವಿಧ ಚಟುವಟಿಕೆಗಳನ್ನು ಆಯೋಜಿಸಿದ್ದರು.
ಸಾಮಾಜಿಕ ಕಾರ್ಯಕರ್ತ ನರಸಿಂಹ ಭಟ್ಟ ಬೋಳಪಾಲ, ಪ್ರಗತಿಪರ ರೈತ ಗಜಾನನ ಭಟ್ಟ ಶೀಗೇಪಾಲ, ಊರಿನ ಗಣ್ಯರಾದ ವೆಂಕಟ್ರಮಣ ಭಟ್ಟ ದೇಶಭಕ್ತಿಯ ಬಗ್ಗೆ ಮಾತನಾಡಿದರು. ಅಂಗನವಾಡಿ ಮಕ್ಕಳು ಸಹ ಈ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಶಾಲಾ ಮುಖ್ಯಾಧ್ಯಾಪಕ ಉದಯ ನಾಯ್ಕ, ಸಹ ಶಿಕ್ಷರಾದ ಭಾರತಿ ಗೌಡ, ಪುಷ್ಪಾ ಅಂಕೋಲೆಕರ್, ಶ್ವೇತಾ ನಾಯ್ಕ ಈ ವೇಳೆ ಇದ್ದರು.
Discussion about this post