ಮದುವೆಯಾಗಿ ಒಂದೆರಡು ವರ್ಷವಾದರೂ ಮಕ್ಕಳಾಗದೇ ಇದ್ದ ದಂಪತಿಗೆ ಬಸಿರು ಎಂಬ ಪದವೇ ನಡುಗಿಸಿಬಿಡುತ್ತದೆ. ಬದಲಾದ ಜೀವನ ಶೈಲಿ, ಮಾನಸಿಕ ಒತ್ತಡ, ಆಹಾರ ವಿಧಾನದಲ್ಲಿನ ಲೋಪದಿಂದ ಅನೇಕರು ಸಂತಾನ ಭಾಗ್ಯ ದೊರೆಯದೇ ಹಿಂಸೆ ಅನುಭವಿಸುತ್ತಿದ್ದಾರೆ. ಅಂಥವರಿಗೆ ವೈಜ್ಞಾನಿಕ ಮಾರ್ಗದರ್ಶನ ನೀಡುವುದಕ್ಕಾಗಿ ಹುಬ್ಬಳ್ಳಿಯ ಬಂಜೆತನ ನಿವಾರಣಾ ತಜ್ಞೆ ಡಾ ವಿನುತಾ ಕುಲಕರ್ಣಿ ಯಲ್ಲಾಪುರಕ್ಕೆ ಬರುತ್ತಿದ್ದಾರೆ!
`ಈಚೆಗೆ ಸಂತಾನಹೀನತೆ ಎಂಬುದು ತೀರಾ ಸಾಮಾನ್ಯ ಸಮಸ್ಯೆ. ಅದಕ್ಕಾಗಿ ಅನೇಕರು ಜೀವನವಿಡೀ ಕೊರಗುತ್ತಿದ್ದು, ಆ ಕೊರಗು ದೂರ ಮಾಡಲು ಸಾಧ್ಯ’ ಎಂಬುದು ಡಾ ವಿನುತಾ ಕುಲಕರ್ಣಿ ಅವರು ಮಾತು. `ಯಲ್ಲಾಪುರದ ದೀಪಾ ಭಟ್ಟ ಅವರಿಗೆ ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿರಲಿಲ್ಲ. ಕಳೆದ ವರ್ಷ ಅವರು ಚಿಕಿತ್ಸೆಗೆ ಬಂದಿದ್ದು, ನುರಿತ ವೈದ್ಯರು ನೀಡಿದ ಸಲಹೆಯನ್ನು ಪಾಲಿಸಿದ್ದರು. ಅದರ ಫಲವಾಗಿ ಈ ವರ್ಷ ಅವರ ಮುದ್ದಿನ ಮಗು ಮಡಲಿನಲ್ಲಿದೆ’ ಎಂದು ಡಾ ವಿನುತಾ ಕುಲಕರ್ಣಿ ಅವರು ನೈಜ ನಿದರ್ಶನಗಳೊಂದಿಗೆ ವಿವರಿಸಿದರು.
ಮಕ್ಕಳಾಗದಿರುವಿಕೆಗೆ ಮಹಿಳೆ ಮಾತ್ರ ಕಾರಣವಲ್ಲ. ಪುರುಷರಲ್ಲಿಯೂ ಶೇ 40 ರಷ್ಟು ಹಾಗೂ ಮಹಿಳೆಯರಲ್ಲಿಯೂ ಶೇ 40ರಷ್ಟು ನ್ಯೂನ್ಯತೆಗಳಿರುತ್ತವೆ. ಇನ್ನೂ ಶೇ 20ರಷ್ಟು ಕಾರಣ ನಿಗೂಢವಾಗಿದ್ದು, ಅದನ್ನು ಪತ್ತೆ ಮಾಡಿ ಸಂತಾನ ಫಲ ದೊರೆಯುವಂತೆ ಮಾಡುವುದು ನುರಿತ ವೈದ್ಯರ ಹೊಣೆ. ದಂಪತಿ ಜೊತೆ ಮುಕ್ತ ಮನಸ್ಸಿನಿಂದ ಮಾತನಾಡಲಿರುವ ಡಾ ವಿನುತಾ ಕುಲಕರ್ಣಿ ಅವರು ಅವರಿಗೆ ಅಗತ್ಯ ಚಿಕಿತ್ಸೆಯನ್ನು ನೀಡುತ್ತಾರೆ. ಪುರುಷ ಹಾಗೂ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿ ಸಮಸ್ಯೆಯನ್ನು ಅವರಿಗೆ ಅರ್ಥ ಮಾಡಿಸಿ ಅಗತ್ಯ ಚಿಕಿತ್ಸೆ ನೀಡುವುದರಿಂದಲೇ ಡಾ ವಿನುತಾ ಕುಲಕರ್ಣಿ ಅವರು ಪ್ರಸಿದ್ಧಿ.
ಸಂತಾನಹೀನತೆ ಬಗ್ಗೆ ಡಾ ವಿನುತಾ ಕುಲಕರ್ಣಿ ಹೇಳುವುದೇನು? ವಿಡಿಯೋ ನೋಡಿ.. ಸುದ್ದಿ ಮುಂದೆ ಓದಿ..
ಫೆ 17ರಂದು ಯಲ್ಲಾಪುರದ ದೇವಿ ದೇವಸ್ಥಾನ ರಸ್ತೆಯಲ್ಲಿನ ಎಪಿಎಂ & ಕ್ಲಿನಿಕ್’ಗೆ ಡಾ ವಿನುತಾ ಕುಲಕರ್ಣಿ ಅವರು ಅವರು ಆಗಮಿಸುತ್ತಿದ್ದಾರೆ. ಅಂದು ಮಧ್ಯಾಹ್ನ 2 ಗಂಟೆಯಿoದ ಸಂಜೆ 5 ಗಂಟೆಯವರೆಗೂ ಡಾ ವಿನುತಾ ಕುಲಕರ್ಣಿ ಅವರು ಮಾತಿಗೆ ಸಿಗುತ್ತಾರೆ. `ಮಕ್ಕಳಾಗಿಲ್ಲ ಎಂಬ ಕೊರಗು ಬೇಡ’ ಎಂದು ಅವರು ದಂಪತಿಗೆ ಧೈರ್ಯ ಹೇಳುತ್ತಿದ್ದು, ವಾರಸುದಾರರನ್ನು ಪಡೆಯಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಆಗಮಿಸಿದವರಿಗೆ ಮಾಹಿತಿ ನೀಡಲಿದ್ದಾರೆ. ಆ ದಿನದ ಕಾರ್ಯಾಗಾರ ಸಂಪೂರ್ಣ ಉಚಿತವಾಗಿದೆ. ಚಿಕಿತ್ಸೆಗೆ ಬರುವವರಿಗೂ ಅವರು ವಿಶೇಷ ರಿಯಾಯಿತಿ ಘೋಷಿಸಿದ್ದಾರೆ.
ಇಲ್ಲಿ ಫೋನ್ ಮಾಡಿ.. ಹೆಸರು ನೋಂದಾಯಿಸಿ: 8431812420 / 08419-262387
#Sponsored