ಮುರುಡೇಶ್ವರ ಜಾತ್ರೆಯಲ್ಲಿ ಸೋಮವಾರ ರಾತ್ರಿ ಆಟೋ ಯೂನಿಯನ್ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.
ಮುರುಡೇಶ್ವರ ಆಟೋ ಯೂನಿಯನ್ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ `ಜಾತ್ರೆ ವೇಳೆಯಲ್ಲಿ ಪ್ರತಿ ವರ್ಷವೂ ಬಸ್ ಸ್ಟಾಂಡ್ ಬಳಿ ಆಟೋ ನಿಲ್ಲಿಸಿ ಬಾಡಿಗೆ ಮಾಡುತ್ತಿದ್ದೇವು. ಈ ವರ್ಷ ನಮ್ಮ ಎಲ್ಲಾ ಆಟೋಗಳನ್ನು ಉದ್ದೇಶಪೂರ್ವಕವಾಗಿ ಕೆನರಾ ಬ್ಯಾಂಕ್ ಬಳಿ ಬ್ಯಾರಿಕೆಡ್ ಹಾಕಿ ನಿಲ್ಲಿಸಲಾಗಿದೆ’ ಎಂದು ದೂರಿದರು. ಇದನ್ನು ಪ್ರಶ್ನಿಸಿ ಆಟೋ ಚಾಲಕರು ಧರಣಿ ನಡೆಸಿದರು. `ನಮ್ಮಿಂದ ಯಾವುದೇ ರೀತಿಯಲ್ಲಿ ಕಾನೂನಿನ ಉಲ್ಲಂಘನೆ ಆಗಿಲ್ಲ’ ಎಂದು ಪ್ರತಿಪಾದಿಸಿದರು.
`ನಾವು ಬಡವರು. ರಿಕ್ಷಾ ಬಾಡಿಗೆಯಿಂದ ಜೀವನ ನಡೆಸುತ್ತಿದ್ದು, ನಮ್ಮ ಹೊಟ್ಟೆ ಮೇಲೆ ಹೊಡೆಯಲಾಗಿದೆ’ ಎಂದು ದೂರಿದರು. `ನೀವು ಬಸ್ ಸ್ಟಾಂಡ್ ಬಳಿ ಹೋಗಿ ಬಾಡಿಗೆ ಮಾಡಿಕೊಳ್ಳಿ’ ಎಂದು ಪೊಲೀಸರು ತಿಳಿಸಿದಾಗ ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು.
`ಪೊಲೀಸರ ಜೊತೆ ಮಾತುಕಥೆ ಮುಗಿದ ನಂತರ ರಿಕ್ಷಾ ಚಾಲನೆ ಮುಂದುವರೆಯಲಿದ್ದು, ಅಲ್ಲಿಯವರೆಗೂ ಪ್ರತಿಭಟನೆ ಅಂಗವಾಗಿ ಬಾಡಿಗೆ ಹೊಡೆಯುವುದಿಲ್ಲ’ ಎಂದು ಧರಣಿನಿರತರು ಘೋಷಿಸಿದರು.