ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಪಕ್ಕದ ರೋಡ್ ಸೇಫ್ಟಿ ಕಬ್ಬಿಣದ ಪಟ್ಟಿಯನ್ನು ಅಪಹರಿಸುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದಿದ್ದಾರೆ. ಯಲ್ಲಾಪುರದ ಮಾಗೋಡು ಕ್ರಾಸಿನ ಬಳಿ ಕಬ್ಬಿಣ್ಣ ಕದಿಯುತ್ತಿದ್ದವನಿಗೆ ಕೆಲವರು ಹಿಡಿದು ಥಳಿಸಿದ್ದಾರೆ.
ಕಳೆದ ಮೂರು ತಿಂಗಳಿನಿAದ ಹೆದ್ದಾರಿ ಅಂಚಿಗೆ ಅಳವಡಿಸಿದ್ದ ಕಬ್ಬಿಣದ ಪಟ್ಟಿಗಳು ಕಾಣೆಯಾಗುತ್ತಿದ್ದವು. ವ್ಯಕ್ತಿಯೊಬ್ಬ ಅದನ್ನು ಕಳ್ಳತನ ಮಾಡಿರುವುದನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ನೋಡಿದ್ದರು. ಈ ಬಗ್ಗೆ ಅವರು ವಿವಿಧ ಕಡೆ ಸುದ್ದಿ ಹಬ್ಬಿಸಿದ್ದರು. ಅದಾಗಿಯೂ ಕಳ್ಳತನ ಮಾತ್ರ ನಿಂತಿರಲಿಲ್ಲ.
ಯಲ್ಲಾಪುರದ ಮಾಗೋಡ ಕ್ರಾಸಿನಿಂದ ಆರತಿಬೈಲಿನವರೆಗೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಅಳವಡಿಸಲಾಗಿದ್ದ ರೋಡ್ ಸೇಫ್ಟಿ ಕಬ್ಬಿಣದ ಪಟ್ಟಿ ಕಾಣೆಯಾಗುವ ಬಗ್ಗೆ ಅನೇಕರು ಕಳವಳವ್ಯಕ್ತಪಡಿಸಿದ್ದರು. ಅದಾಗಿಯೂ ಆ ಕಳ್ಳನನ್ನು ಹಿಡಿಯಲು ಮೂರು ತಿಂಗಳಿನಿoದ ಪ್ರಯತ್ನಿಸುತ್ತಿದ್ದರು. ಸೋಮವಾರ ಸಿಕ್ಕಿಬಿದ್ದ ಕಳ್ಳ `ತಾನು ಕೊಂಡೆಮನೆಯ ಬಾಬು’ ಎಂದು ಪರಿಚಯಿಸಿಕೊಂಡು ಕಟ್ಟಿಗೆ ತರಲು ಬಂದಿರುವುದಾಗಿ ಉತ್ತರಿಸಿದರು. ಬೈಕಿನಲ್ಲಿ ಕಬ್ಬಿಣದ ಪಟ್ಟಿ ನೋಡಿ ಎರಡು ಬಾರಿಸಿದಾಗ ತಪ್ಪು ಒಪ್ಪಿಕೊಂಡರು.
ಕದ್ದ ಕಬ್ಬಿಣವನ್ನು ಗುಜುರಿ ಅಂಗಡಿಗೆ ಮಾರುವುದಾಗಿ ಸಿಕ್ಕಿಬಿದ್ದ ಕಳ್ಳ ಹೇಳಿಕೊಂಡಿದ್ದು, ದೊಡ್ಡವರ ಹೆಸರು ಹೇಳಿದ ತಕ್ಷಣ ಹೆದ್ದಾರಿ ಸಿಬ್ಬಂದಿಯೂ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಈಗಾಗಿ ಹೆಚ್ಚಿನ ವಿಚಾರಣೆಗೆ ಆ ಕಳ್ಳ ಪೊಲೀಸರ ಕೈಗೆ ಸಹ ಸಿಕ್ಕಿಲ್ಲ.