`ಜನಿವಾರ ಧರಿಸುವುದು ಕಾನೂನುಬಾಹಿರವಲ್ಲ. ಜನಿವಾರ ಧರಿಸುವುದರಿಂದ ಯಾವುದೇ ಪರೀಕ್ಷಾ ನಿಯಮಗಳಿಗೆ ಧಕ್ಕೆಯಾಗುವುದಿಲ್ಲ. ಅದಾಗಿಯೂ ಬಿದರ್ ಹಾಗೂ ಶಿವಮೊಗ್ಗದಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗಳ ಪರೀಕ್ಷೆಗೆ ಅಡ್ಡಿಪಡಿಸಿದ್ದು ಸರಿಯಲ್ಲ’ ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.
`ಬ್ರಾಹ್ಮಣರು ಧರಿಸಿದ ಜನಿವಾರ ವಿಷಯವಾಗಿ ಅಧಿಕಾರಿಗಳು ನಡೆದುಕೊಂಡ ರೀತಿ ಖಂಡನೀಯ. ಭಾರತೀಯ ಸಂವಿಧಾನ ಪ್ರತಿಯೊಬ್ಬರಿಗೂ ಅವರವರ ಧರ್ಮ ಆಚರಣೆಗೆ ಅವಕಾಶ ನೀಡಿದೆ. ಹೀಗಿರುವಾಗ ಜನಿವಾರ ಧರಿಸುವುದು ಪರೀಕ್ಷಾ ನಿಯಮಗಳಿಗೆ ಅಡ್ಡಿಯಾಗುವುದಿಲ್ಲ’ ಎಂದು ಶ್ರೀಗಳು ಹೇಳಿದ್ದಾರೆ.
`ಸರ್ಕಾರಿ ಅಧಿಕಾರಿಗಳು ಜವಾಬ್ದಾರಿ ಸ್ಥಾನದಲ್ಲಿರುತ್ತಾರೆ. ಅವರು ಎಲ್ಲರನ್ನು ಸರಿಸಮಾನವಾಗಿ ನೋಡಬೇಕು. ಜನಿವಾರವನ್ನು ಮುಂದಿಟ್ಟುಕೊAಡು ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ಕೆಲಸ ಮಾಡಿದ್ದು ಸರಿಯಲ್ಲ’ ಎಂದು ಅವರು ಅಭಿಪ್ರಾಯ ಹಂಚಿಕೊ0ಡಿದ್ದಾರೆ.