ಮುಂಡಗೋಡು: ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದವನಿಗೆ ನ್ಯಾಯಾಲಯ 3 ವರ್ಷ ಜೈಲು ಹಾಗೂ 8 ಸಾವಿರ ರೂ ದಂಡ ವಿಧಿಸಿದೆ. ಸಂತ್ರಸ್ತರಿಗೆ 5 ಸಾವಿರ ರೂ ಪರಿಹಾರ ವಿತರಿಸುವಂತೆಯೂ ಸೂಚಿಸಿದೆ.
2022ರ ಅಗಸ್ಟ 18ರಂದು ಶ್ಯಾಮಪ್ರಸಾದ ಕುಟ್ಟಪ್ಪ ಎಂಬಾತ ದಿವಾಕರನ್ ರಾಘವನ್ ಎಂಬಾತರ ಮೇಲೆ ಕಬ್ಬಿಣದ ರಾಡಿನಿಂದ ಹೊಡೆದಿದ್ದ. ಜಗಳ ಬಿಡಿಸಲು ಹೋದ ರಾಧಾಮಣಿ ದಿವಾಕರನ್ ಅವರಿಗೂ ಬೈದಿದ್ದ. ನಂತರ ಕಬ್ಬಿಣದ ರಾಡನ್ನು ಹಳ್ಳಕ್ಕೆ ಎಸೆದು ಸಾಕ್ಷಿ ನಾಶ ಮಾಡಿದ್ದ. ಶ್ಯಾಮಪ್ರಸಾದ ವಿರುದ್ಧ ಕೊಲೆ ಯತ್ನದ ಆರೋಪ ಕೇಳಿ ಬಂದಿತ್ತು. ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪಿಎಸ್ಐ ಬಸವರಾಜ ಮಬನೂರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಶಿರಸಿ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕೇಣಿ ಎಲ್ಲಾ ಸಾಕ್ಷಿಗಳ ಮಾತು ಆಲಿಸಿದರು.
ಶ್ಯಾಮಪ್ರಸಾದ ಕುಟ್ಟಪ್ಪ ಮೇಲಿನ ಆರೋಪ ಋಜುವಾತಾದ ಕಾರಣ ಅಕ್ಟೊಬರ್ 22ರಂದು ನ್ಯಾಯಾಧೀಶರು ಶ್ಯಾಮಪ್ರಸಾದ’ಗೆ ಶಿಕ್ಷೆ ಪ್ರಕಟಿಸಿದರು. ಅದರ ಪ್ರಕಾರ ಮೂರು ವರ್ಷ ಜೈಲು, 5 ಸಾವಿರ ದಂಡದ ಜೊತೆ ಸಂತ್ರಸ್ತ ಗಾಯಾಳುವಿಗೆ ಸಹ 5 ಸಾವಿರ ರೂ ಪರಿಹಾರ ಒದಗಿಸಬೇಕು ಎಂದು ಅವರು ಆದೇಶಿಸಿದರು. ಸರ್ಕಾರಿ ನ್ಯಾಯವಾದಿ ರಾಜೇಶ್ ಮಳಗಿಕರ್ ನೊಂದವರ ಪರ ವಾದಿಸಿದ್ದರು.