ಯಲ್ಲಾಪುರ: ರಸ್ತೆಗೆ ಮಣ್ಣು ಹೊಯ್ಯುತ್ತಿದ್ದ ಜೆಸಿಬಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆನಗೋಡು-ಬಿಸಗೋಡು ಭಾಗದಲ್ಲಿನ ಕಚ್ಚಾ ರಸ್ತೆಗೆ ಜೆಸಿಬಿ ಮೂಲಕ ಮಣ್ಣು ಹಾಕಲಾಗುತ್ತಿತ್ತು. ಗ್ರಾಮಸ್ಥರು ಶ್ರಮದಾನ ನಡೆಸುತ್ತಿದ್ದರು. ದೂರು ಆಧರಿಸಿ ಅಲ್ಲಿ ಆಗಮಿಸಿದ ಅರಣ್ಯಾಧಿಕಾರಿಗಳು ಕೆಲಸವನ್ನು ನಿಲ್ಲಿಸಿದ್ದಾರೆ. ಜೊತೆಗೆ ಜೆಸಿಬಿಯನ್ನು ಸಹ ವಶಕ್ಕೆ ಪಡೆದಿದ್ದಾರೆ.
ಅರಣ್ಯ ಪ್ರದೇಶದಲ್ಲಿನ ಮಣ್ಣನ್ನು ಅಕ್ರಮವಾಗಿ ತೆಗೆದಿದ್ದಾರೆ ಎಂಬುದು ಅರಣ್ಯಾಧಿಕಾರಿಗಳ ಆರೋಪ. ಸಾರ್ವಜನಿಕ ಅನುಕೂಲಕ್ಕಾಗಿ ಅಗತ್ಯವಿರುವ ಮಣ್ಣನ್ನು ಹೊಯ್ದುಕೊಳ್ಳಲು ಅಧಿಕಾರಿಗಳು ಬಿಡುತ್ತಿಲ್ಲ ಎಂಬುದು ಜನರ ಅಳಲು. ಯಂತ್ರೋಪಕರಣಗಳನ್ನು ವಶಕ್ಕೆ ಪಡೆದ ಕಾರಣ ಆ ಭಾಗದ ಅನೇಕರು ಅರಣ್ಯ ಇಲಾಖೆ ಕಚೇರಿಗೆ ಆಗಮಿಸಿದ್ದಾರೆ.
Discussion about this post