ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮ ಒನ್ ಸ್ಥಾಪನೆಗೆ ಸರ್ಕಾರ ಅರ್ಜಿ ಕರೆದಿದೆ.
ಶಿರಸಿ ತಾಲೂಕಿನ ಮೇಲಿನ ಓಣಿಕೇರಿ, ಜೊಯಿಡಾ ತಾಲೂಕಿನ ಗಂಗೋಡ, ನಂದಿಗದ್ದೆ, ಅಣಶಿ, ಬಜಾರ್ಕುಣಂಗ, ನಾಗೋಡ ಹಾಗೂ ಯಲ್ಲಾಪುರ ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯತಗಳಲ್ಲಿ ಗ್ರಾಮ ಓನ್ ಕೇಂದ್ರ ಸ್ಥಾಪನೆಗೆ ಅವಕಾಶವಿದೆ. ಇಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರವಾದ ಗ್ರಾಮ ಒನ್ ಶುರು ಮಾಡುವವರಿಗಾಗಿ ಹುಡುಕಾಟ ನಡೆದಿದೆ.
ಆಸಕ್ತರು ಮಾಹಿತಿಗೆ https://www.karnatakaone.gov.in/Public/GramaOneFranchiseeTerms ವೆಬ್ಸೈಟ್ ನೋಡಬಹುದು. ಅಥವಾ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿಯೂ ಮಾಹಿತಿ ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿಯೂ ಆಗಿರುವ ಗ್ರಾಮ ಒನ್ ಯೋಜನೆಯ ಸದಸ್ಯ ಕಾರ್ಯದರ್ಶಿ ಸಾಜಿದ್ ಅಹಮದ್ ಮುಲ್ಲಾ ಹೇಳಿದ್ದಾರೆ.
S News Advertisement: ರೇಶನ್ ಕಾರ್ಡ ತಿದ್ದುಪಡಿ, ಸ್ಕಾಲರ್ಶಿಫ್, ಆರೊಗ್ಯ ವಿಮೆ, ಶ್ರಮಿಕ ಕಾರ್ಡ ಸೇರಿ ಎಲ್ಲಾ ಮಾಹಿತಿಗೆ ಇಲ್ಲಿ ಫೋನ್ ಮಾಡಿ: 94803 62267