ಯಲ್ಲಾಪುರದ ಚಂದ್ಗುಳಿ ಬಳಿಯ ದೇಸಾಯಿಮನೆ ತೇಜಾ ಭಟ್ಟ ನಾಪತ್ತೆ ಪ್ರಕರಣವನ್ನು ವಿಚಾರಣೆ ನಡೆಸಿದ ಹೈಕೋರ್ಟ `ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಇಲ್ಲ’ ಎಂದು ಅಭಿಪ್ರಾಯಪಟ್ಟಿದೆ. `ಪೊಲೀಸರು ಆ ಕುಟುಂಬದ ಮನೆಗೆ ತೆರಳಿ ಮನೆಯವರಿಗೆ ಸಾಂತ್ವಾನ ಹೇಳಬೇಕು’ ಎಂದು ನ್ಯಾಯಾಧೀಶರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ `ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿದರೂ ಯುವತಿ ಪತ್ತೆಯಾಗಿಲ್ಲ. ಇದನ್ನು ಪೊಲೀಸರ ನಿರ್ಲಕ್ಷ್ಯ ಎನ್ನುವ ಹಾಗಿಲ್ಲ. ಪೊಲೀಸರು ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಪ್ರಕರಣಕ್ಕೆ ಸಂಬoಧಿಸಿ ಪೊಲೀಸರು ಪ್ರಯತ್ನ ಮುಂದುವರೆಸುವ ಜೊತೆ ಕುಟುಂಬದವರ ವಿಶ್ವಾಸಗಳಿಸಬೇಕು. ಕುಟುಂಬದವರನ್ನು ಖುದ್ದು ಭೇಟಿಯಾಗಿ ಅವರಿಗೆ ಸಾಂತ್ವಾನ ಹೇಳಬೇಕು’ ಎಂದು ಆದೇಶಿಸಿದೆ.
`ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಭಗವಂತನ ಕೃಪೆ ಇದ್ದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ’ ಎಂದು ನ್ಯಾಯಾಧೀಶರು ಹೇಳಿದ್ದಾರೆ. `ಮಗಳು ಕಾಣೆ ಆದಾಗ ಕುಟುಂಬದವರಿಗೆ ಊಟ ಸೇರಲ್ಲ. ನಿದ್ದೆಯೂ ಸರಿಯಾಗಿ ಮಾಡುವುದಿಲ್ಲ. ಹೀಗಾಗಿ ಆತಂಕದಲ್ಲಿರುವ ಕುಟುಂಬದವರು ಒತ್ತಡ ತರುವುದು ಸಹಜ. ಪೊಲೀಸರು ತಾಳ್ಮೆಯಿಂದ ತಾವು ಏನು ಮಾಡಿದ್ದೇವೆ? ಎಂದು ಅವರ ಕುಟುಂಬದವರಿಗೆ ಮನವರಿಕೆ ಮಾಡಬೇಕು’ ಎಂದು ಹೇಳಿದರು.
`ಈ ಬಗ್ಗೆ ಹೆಚ್ಚಿನ ಚರ್ಚೆ ನಡೆದರೆ ತನಿಖೆಗೆ ತೊಂದರೆಯಾಗಬಹುದು. ಹೆಚ್ಚಿನ ಚರ್ಚೆ ನಡೆಯದೇ ಯುವತಿ ಪತ್ತೆ ಹಚ್ಚುವ ಕೆಲಸ ನಡೆಯಲಿ’ ಎಂದು ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದರು. ಪೊಲೀಸರ ಕಾರ್ಯಕ್ಕೆ ಧಾರವಾಡ ಹೈಕೋರ್ಟ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದನ್ನು ಎಸ್ಪಿ ಎಂ ನಾರಾಯಣ ಅವರು ಹಂಚಿಕೊoಡಿದ್ದಾರೆ.
ನ್ಯಾಯಾಲಯದ ಕಲಾಪದಲ್ಲಿ ಏನಾಯ್ತು? ವಿಡಿಯೋ ಇಲ್ಲಿ ನೋಡಿ…