ಯಲ್ಲಾಪುರ: ಈಚೆಗೆ ಕಿರವತ್ತಿಯಲ್ಲಿ ನಡೆದ ಕರ್ನಾಟಕ ರಾಜ್ಯ ಧನಗರ ಗೌಳಿ ಪ್ರೊ-ಕಬ್ಬಡ್ಡಿಯಲ್ಲಿ ಕರಡೊಳ್ಳಿಯ `ಸಿಂಧೆ ಸೋಲ್ಜರ್ಸ್’ ತಂಡ ಉತ್ತಮ ಸ್ಪರ್ಧೆ ನೀಡಿದೆ.
ಕರಡೊಳ್ಳಿಯ `ಸಿಂಧೆ ಸೋಲ್ಜರ್ಸ್’ ತಂಡಕ್ಕೆ ಪಾಂಡು ಸಿಂಧೆ ಅವರು ಪ್ರಾಯೋಜಕರಾಗಿದ್ದರು. ಸೈನಿಕ ಧೂಳು ಸಿಂಧೆ ಅಧ್ಯಕ್ಷತೆಯಲ್ಲಿ ತಂಡ ಸ್ಪರ್ಧೆ ನೀಡಿತು. ಕೊನೆಗೆ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ `ಸಿಂಧೆ ಸೋಲ್ಜರ್ಸ್’ ತಂಡದವರು ತೃತೀಯ ಬಹುಮಾನವನ್ನು ಗೆದ್ದರು.
ಡಿ 16ರಿಂದ ಎರಡು ದಿನಗಳ ಕಾಲ ಕಿರವತ್ತಿ ಪ್ರೌಢಶಾಲೆ ಮೈದಾನದಲ್ಲಿ ರಾಜ್ಯ ಧನಗರ ಗೌಳಿ ಪ್ರೊಕಬ್ಬಡಿ ಸೀಸನ್-2 ನಡೆದಿದ್ದು, 10 ತಂಡದವರು ಭಾಗವಹಿಸಿದ್ದರು. `ಸಿಂಧೆ ಸೋಲ್ಜರ್ಸ್’ ತಂಡದ ಸಾಧನೆಗೆ ರಾಜ್ಯ ಧನಗರ ಗೌಳಿ ಯುವಸೇನೆಯ ರಾಜ್ಯ ಖಜಾಂಚಿ ಲಕ್ಷ್ಮಣ ಕೊಕರೆ ಸಂತಸ ವ್ಯಕ್ತಪಡಿಸಿದರು.