ಕಾರವಾರದ ಚಿತ್ತಾಕುಲ ಗ್ರಾ ಪಂ ಸದಸ್ಯ ದಿಲೀಪ್ ಗಜನಿಕರ್ ಎಂಬಾತರನ್ನು ಪೊಲೀಸರು ಬಂಧಿಸಿದ್ದು, ಅವರಿಗೆ ಚಿತ್ರಹಿಂಸೆ ನೀಡಿದ ಆರೋಪ ವ್ಯಕ್ತವಾಗಿದೆ. ಬಿಜೆಪಿ ಬೆಂಬಲಿತ ಗ್ರಾ ಪಂ ಸದಸ್ಯ ದಿಲೀಪ್’ಗೆ ತೊಂದರೆ ನೀಡಿದನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಖಂಡಿಸಿದ್ದಾರೆ. `ಕಾರವಾರವೇ ಆಗರಲಿ.. ಯಲ್ಲಾಪುರ-ಮುಂಡಗೋಡು ಆಗಿರಲಿ.. ರಾಜಕೀಯ ಒತ್ತಡಕ್ಕೆ ಮಣಿದು ಬಡ ಜನರಿಗೆ ತೊಂದರೆ ನೀಡಿದರೆ ಅದನ್ನು ಸಹಿಸುವುದಿಲ್ಲ’ ಎಂದು ಕಾಗೇರಿ ಹೇಳಿದ್ದಾರೆ.
ಗಣೇಶ ವಿಸರ್ಜನೆ ವೇಳೆ ಡಿಜೆ ಬಳಸಿದ ವಿವಾದಕ್ಕೆ ಸಂಬ0ಧಿಸಿ ಚಿತ್ತಾಕುಲ ಪೊಲೀಸರು ದಿಲೀಪ ಅವರನ್ನು ಬಂಧಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದಿಲಿಪ್ ಅವರಿಗೆ ಹಿಂಸೆ ನೀಡಿದ ಬಗ್ಗೆ ಅವರ ಕುಟುಂಬದವರು ಆರೋಪಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಯಾವುದೇ ಹಿಂಸೆ ನೀಡಿಲ್ಲ ಎಂಬ ವರದಿ ಬಂದಿದೆ. ಈ ನಡುವೆ ವೈದ್ಯರು ಸಹ ಒತ್ತಡಕ್ಕೆ ಮಣಿದು ಸುಳ್ಳು ವರದಿ ನೀಡಿದ ಬಗ್ಗೆ ಕುಟುಂಬದವರು ದೂರಿದ್ದಾರೆ.
ದಿಲೀಪ ಗಜನಿಕರ್ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಯಾರದೋ ಕುಮ್ಮಕ್ಕಿನಿಂದ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದು ಅವರ ಸ್ನೇಹಿತರ ದೂರು.
ಇದೇ ಕೊನೆ ಎಚ್ಚರಿಕೆ!
ಗುರುವಾರ ಸಂಜೆ ಯಲ್ಲಾಪುರದಲ್ಲಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ `ಬಿಜೆಪಿ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಯ ಬಗ್ಗೆ ವಿವರ ಪಡೆದಿದ್ದೇನೆ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಜನರಿಗೆ ತೊಂದರೆ ನೀಡುವುದು ಸರಿಯಲ್ಲ. ಅದು ಕಾರವಾರವೇ ಆಗಿರಲಿ. ಯಲ್ಲಾಪುರ-ಮುಂಡಗೋಡು ಆಗಿರಲಿ. ತೊಂದರೆ ನೀಡುವುದನ್ನು ಸಹಿಸಲ್ಲ’ ಎಂದರು. `ಬಿಜೆಪಿ ಕಾರ್ಯಕರ್ತರಿಗೆ ಯಾವುದೇ ಹಂತದಲ್ಲಿ ಏನೂ ತೊಂದರೆ ಆಗದಂತೆ ಸೂಚಿಸಿದ್ದೇನೆ. ಅದಾಗಿಯೂ ಅಧಿಕಾರಿಗಳು ತೊಂದರೆ ನೀಡಿದರೆ ನಮ್ಮ ಬಿಜೆಪಿ ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಲಿದೆ’ ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಅಧಿಕ್ಷಕರ ಮಾತೇನು?
`ಸೆ 17ರ ರಾತ್ರಿ ದಿಲೀಪ ಗಜನಿಕರ್ ಕರ್ತವ್ಯದಲ್ಲಿದ್ದ ಪಿಎಸ್ಐ ಕಾಲರ್ ಪಟ್ಟಿ ಹಿಡಿದು ಹಲ್ಲೆಗೆ ಯತ್ನಿಸಿದ್ದು, ಆರೋಪಿ ಮೇಲೆ ಯಾರೂ ಹಲ್ಲೆ ನಡೆಸಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ ಸಹ ಆತನ ಮೇಲೆ ಹಲ್ಲೆ ನಡೆದಿಲ್ಲ ಎಂಬ ವರದಿ ಬಂದಿದ್ದು, ಆತ ಸದೃಢವಾಗಿದ್ದಾನೆ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಸ್ಪಷ್ಠೀಕರಣ ನೀಡಿದ್ದಾರೆ.