ಕಾರವಾರ: ಕೈಗಾ ಅಣು ವಿದ್ಯುತ್ ಘಟಕದ ಸಿಎಸ್ಆರ್ ನಿಧಿಯಿಂದ ವಿವಿಧ ಅಭಿವೃದ್ಧಿ ಚಟುವಟಿಕೆ ನಡೆಸಲಾಗುತ್ತಿದ್ದು, ಪ್ರಸ್ತುತ ಗ್ರಾಮೀಣ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವಂತೆ ಸೋಲಾರ್ ಆಧಾರಿತ ಲಾಟೀನ್ ವಿತರಿಸಲಾಗಿದೆ.
ಕಾರವಾರದ ನಗೆ ಶಾಲೆಗೆ ಭೇಟಿ ನೀಡಿದ ಅಣು ವಿದ್ಯುತ್ ಘಟಕದ ಅಧಿಕಾರಿಗಳು ಅಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಸೋಲಾರ್ ಪ್ಯಾನಲ್, ವಿದ್ಯುತ್ ಚಾರ್ಜರ್ ಹಾಗೂ ದೀಪವನ್ನು ವಿತರಿಸಿದರು. ಸಿಎಸ್ಆರ್ ಯೋಜನೆಯ ಅಧಿಕಾರಿ ದಿನೇಶ ಗಾಂವಕಾರ ಹಾಗೂ ತಂಡದ ಈ ವೇಳೆ ಮಕ್ಕಳ ಜೊತೆ ಬೆರೆತರು.
ಸಿಎಸ್ಆರ್ ಯೋಜನೆ ಅಧ್ಯಕ್ಷ ಎನ್ ತಿಪ್ಪೆಸ್ವಾಮಿ ಹಾಗೂ ಅವರ ತಂಡದವರಿಗೆ ಶಾಲಾ ಮಕ್ಕಳು ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಮುಖ್ಯಾಧ್ಯಾಪಕ ಅಖ್ತರ ಸೈಯದ್ ಮಾತನಾಡಿ, `ಕೈಗಾ ಯೋಜನಾ ಪ್ರದೇಶಗಳಲ್ಲಿನ ಶಾಲೆಗಳು ಬೆಟ್ಟ-ಗುಡ್ಡದ ನಡುವೆಯಿದೆ. ಇಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯವಾಗಲಿದ್ದು, ಸೋಲಾರ್ ದೀಪ ನೀಡಿರುವುದರಿಂದ ಮಕ್ಕಳ ಶೈಕ್ಷಣಿಕ ಬದುಕಿಗೆ ನೆರವಾಗಲಿದೆ’ ಎಂದರು.
ಸಹಶಿಕ್ಷಕಿ ರೂಪಾ ಉಮೇಶ ನಾಯ್ಕ, ಅತಿಥಿ ಶಿಕ್ಷಕಿ ರೇಷ್ಮಾ ಹುಲಸ್ವಾರ, ಕೈಗಾ ಯೋಜನಾ ಶಿಕ್ಷಕಿ ಪ್ರಿಯಾ ಲಾಂಜೇಕರ ಇದ್ದರು.