ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಶಿಯೇಶನ್ ನಡೆಸುತ್ತಿರುವ `ಯಲ್ಲಾಪುರ ಕ್ರಿಕೆಟ್ ಪ್ರಿಮಿಯರ್ ಲೀಗ್’ ಈ ಭಾನುವಾರದಿಂದ ಕಾಳಮ್ಮನಗರ ಕ್ರೀಡಾಂಗಣದಲ್ಲಿ ನಡೆಯಲಿದೆ. 10 ತಂಡಗಳು ಈ ಹಣಹಣಿಯಲ್ಲಿ ಭಾಗವಹಿಸಲಿದ್ದು, ಎಲ್ಲಾ ಬಗೆಯ ಸಿದ್ಧತೆಗಳು ಜೋರಾಗಿ ನಡೆದಿದೆ.
ಮೂರು ವಾರಗಳ ಕಾಲ ಈ ಆಟ ನಡೆಯಲಿದೆ. ಕ್ರಿಕೆಟ್ ಆಯೊಜನೆಯ ಪೂರ್ವಭಾವಿಯಾಗಿ ಕೃಷ್ಣ ರೆಸೋಯಿ ಹೊಟೇಲ್’ನಲ್ಲಿ ಕಿರವತ್ತಿಯ ಎಸ್ ಜೆ ರಾಕರ್ಸ ತಂಡದ ಸಭೆ ನಡೆಯಿತು. ಈ ತಂಡದ ಸದಸ್ಯರಿಗೆ ಜಿ ಪಂ ಮಾಜಿ ಸದಸ್ಯ ವಿಜಯ ಮಿರಾಶಿ ಸಮವಸ್ತ್ರ ವಿತರಿಸಿದರು. `ಎಸ್ ಜೆ ರಾಕರ್ಸ ತಂಡ ಈ ಕ್ರೀಡೆಯಲ್ಲಿ ಗೆದ್ದು ಬರಲಿ’ ಎಂದು ಶುಭ ಹಾರೈಸಿದರು.
ವಿಜಯ ಮಿರಾಶಿ ಅವರ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಈ ವೇಳೆ ಸಂಭ್ರಮಾಚರಣೆಯೂ ನಡೆದಿದ್ದು, ಎಸ್.ಜೆ.ರಾಕರ್ಸ ತಂಡದ ಸದಸ್ಯರು ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಇದಾದ ನಂತರ ಎಲ್ಲರೂ ಸೇರಿ ಊಟ ಮಾಡಿದರು. ಎಪಿಎಂಸಿ ಉಪಾಧ್ಯಕ್ಷ ರಾಘವೇಂದ್ರ ಗೊಂದಿ, ವೈಪಿಎಲ್ ಅಧ್ಯಕ್ಷ ಸತೀಶ ನಾಯ್ಕ ಇಡಗುಂದಿ, ದಲಿತ ಸಮಾಜದ ಮುಖಂಡ ಪರಶುರಾಮ ಚಲವಾದಿ, ಡಿಆರ್ಎಫ್ಓ ಗುರುಪ್ರಸಾದ ಲಮಾಣಿ, ಪ್ರಮುಖರಾದ ಆನಂದ ಕುರಿ, ಶಿವಪ್ರಕಾಶ್ ಕವಳಿ, ಎಸ್ ಜೆ ರಾಕರ್ಸ ತಂಡದ ಮಾಲಕ ಸುಜೀತ್ ಜೋರಾಪುರ, ಅಮಿತ್ ಗುನಗಿ, ದೀಲಿಪ್ , ರಜತ್ ಖಾನಾಪುರ, ಮಾರುತಿ ಕಳಸುರಕರ, ವಿಜಯ ಖಾನಾಪುರ, ಪರಶುರಾಮ ಮಂಗಳಿ, ವಿನೋದ ಖಾನಾಪುರ ಇತರರು ಇದ್ದರು