ಹಳಿಯಾಳ: `ಕಳೆದ ನಾಲ್ಕು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಜೊತೆ ಭಾವನಾತ್ಮಕ ಸಂಬ0ಧ ಹೊಂದಿದ್ದ ಸದಾಶಿವಗಡ ಸೇತುವೆ (Kali bridge) ಕುಸಿದಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಬೇಕು’ ಎಂದು ಕೇಂದ್ರ ಸಾರಿಗೆ ಸಚಿವರಾದ ನಿತಿನ ಗಡ್ಕರಿ ಅವರಿಗೆ ಶಾಸಕ ಆರ್.ವಿ.ದೇಶಪಾಂಡೆ ಅವರು ಪತ್ರ ಬರೆದಿದ್ದಾರೆ.
ಕಾರವಾರ-ಗೋವಾ ಮಾರ್ಗದ ಈ ಸೇತುವೆ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳ ಸಂಪರ್ಕ ಕೊಂಡಿಯಾಗಿತ್ತು. ಈ ಸೇತುವೆ ರಾತ್ರಿ ಹೊತ್ತಿನಲ್ಲಿ ಅದು ಸಂಚಾರ ತುಂಬಾ ಕಡಿಮೆ ಇರುವ ಸಮಯದಲ್ಲಿ ಬಿದ್ದಿದ್ದು ದೊಡ್ಡ ದುರಂತ ತಪ್ಪಿದೆ. ಈ ಹೆದ್ದಾರಿಯ ಸೇತುವೆಯ ಕುಸಿತದಿಂದಾಗಿ ಪ್ರವಾಸೋದ್ಯಮ ಜೊತೆಗೆ ಅಭಿವೃದ್ಧಿ ಕುಂಠಿತವಾಗುತ್ತಿದ್ದು, ಈಗಿರುವ ಸೇತುವೆ ಮೇಲೆ ಹೆಚ್ಚು ಒತ್ತಡ ಬೀಳದಂತೆ ಶೀಘ್ರವಾಗಿ ಹೊಸ ಸೇತುವೆ ನಿರ್ಮಾಣ ಮಾಡಬೇಕಿದೆ. ಹೀಗಾಗಿ ಹೆದ್ದಾರಿ ಪ್ರಾಧಿಕಾರಕ್ಕೆ ವಿಶೇಷ ಅನುದಾನ ಮಂಜೂರು ಮಾಡಬೇಕು’ ಎಂದವರು ಮನವಿ ಮಾಡಿದ್ದಾರೆ.
Discussion about this post