ಕಾರವಾರ: ಕರಾವಳಿಯ ಮೀನು ಖಾದ್ಯಕ್ಕೆ ಸೋಲದ ನಾಲಿಗೆಯಿಲ್ಲ. ಅದರಲ್ಲಿಯೂ ಕಾರವಾರದಲ್ಲಿ ಬಹುತೇಕರು ಮೀನು ಇಲ್ಲದೇ ಜನ ಊಟ ಮಾಡುವುದಿಲ್ಲ!
ಕಾರವಾರ ಬಸ್ ನಿಲ್ದಾಣದ ಹತ್ತಿರ ಹಳದಿಪುರ ಪೆಟ್ರೋಲ್ ಬಂಕ್ ಬಳಿ ಕರಾವಳಿ ಖಾದ್ಯಗಳನ್ನು ಒಳಗೊಂಡ `ಡ್ರೀಮ್ ಹೊಟೇಲ್’ನ್ನು ಭಾನುವಾರ ಉದ್ಘಾಟನೆಯಾಗಿದೆ. ಕುಮಟಾ ಮದ್ಗುಣಿಯ ಸಚಿನ್ ಎಂ ಪಟಗಾರ ಹಾಗೂ ರಾಘವೇಂದ್ರ ಪ್ರಕಾಶ ತೆಂಡುಲ್ಕರ್ ಜೊತೆಯಾಗಿ ಈ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು.
ಮೊದಲು ಅಂಗಡಿ ವ್ಯಾಪಾರ ನಡೆಸುತ್ತಿದ್ದ ಅವರು ಹೊಟೇಲ್ ಮಾಡುವುದಾಗಿ ಹೇಳಿದಾಗ ಅವರು ಕುಟುಂಬದವರು ಸಹಕಾರ ನೀಡಿದ್ದಾರೆ. `ಸಚಿನ್ ಹಾಗೂ ರಾಘವೇಂದ್ರ ಅವರ ಅಮ್ಮನೇ ಅಲ್ಲಿ ಮುಖ್ಯ ಅಡುಗೆ ತಯಾರಿಕರಾಗಿದ್ದು, ಮೀನು ಖಾದ್ಯಗಳನ್ನು ಸಿದ್ಧಪಡಿಸುವಲ್ಲಿ ಅವರು ಎತ್ತಿದ ಕೈ. ಹೀಗಾಗಿ ಈ ಹೊಟೇಲ್’ಗೆ ಹೋದವರಿಗೆ ಅಮ್ಮನ ಕೈ ರುಚಿಯ ನೆನಪಾಗುತ್ತದೆ’ ಎಂದು ಅಕ್ತಾರ್ ಸಯ್ಯದ್ ಅನುಭವ ಹಂಚಿಕೊoಡರು.
`ಭಾನುವಾರ ನಾನು ವೆಜ್ ಮೊಮ್ಮೋಸ್’ ಫಿಂಗರ್ ಚಿಪ್ಸ ಹಾಗೂ ದಂ ಬಿರಿಯಾನಿ ಅಸ್ವಾದಿಸಿದೆ. ಹೊಸ ಸಾಹಸಕ್ಕೆ ಇಳಿದ ತರುಣರು ಗುಣಮಟ್ಟದ ಆಹಾರ ನೀಡುವಲ್ಲಿ ಸಫಲರಾಗಿದ್ದಾರೆ’ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು. ಭಾನುವಾರ ಸಂತೆ ಮಾರುಕಟ್ಟೆಗೆ ಬಂದ ಅನೇಕರು ಇಲ್ಲಿ ತೆರಳಿ ಊಟ ಸವಿದರು. ಸಂಜೆ ವೇಳೆ ಹಲವರು ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು.