ಕಾರವಾರದ ಕೋಡಿಭಾಗದಲ್ಲಿರುವ ಹೆಂಜಾ ನಾಯ್ಕರ ಸಮಾಧಿಗೆ ತೆರಳಿದ ಕರುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ಹೆಂಜಾ ನಾಯ್ಕ ಅವರ ಜನ್ಮದಿನ ಆಚರಿಸಿದರು. ಹೆಂಜಾ ನಾಯ್ಕ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು.
ಈ ವೇಳೆ ಹೆಂಜಾ ನಾಯ್ಕ ಅವರ ಕುರಿತು ಲಕ್ಷಿö್ಮÃಶ ಹೆಗಡೆ ಸೋಂದಾ ಅವರು ಬರೆದ ಪುಸ್ತಕವನ್ನು ಶಾಲಾ ಮಕ್ಕಳಿಗೆ ವಿತರಿಸುವ ಬಗ್ಗೆಯೂ ನಿರ್ಧರಿಸಲಾಯಿತು. `ಸದಾಶಿವಗಡ ಕೋಟೆಯಲ್ಲಿ ಕ್ರಾಂತಿವೀರ ಹೆಂಜಾ ನಾಯ್ಕ ಅವರ ಸ್ಮಾರಕ ನಿರ್ಮಿಸಲು ಸರ್ಕಾರ ಮುಂದಾಗಬೇಕು’ ಎಂದು ಕರವೇ ಅಧ್ಯಕ್ಷ ಎನ್ ದತ್ತಾ ಆಗ್ರಹಿಸಿದರು.
`ಕಾರವಾರದ ಕ್ಷತ್ರಿಯ ಕೋಮಾರಪಂಥ ಸಮುದಾಯದ ಹೆಂಜಾ ನಾಯ್ಕ ವಿಜಯನಗರದ ಮತ್ತು ಸೋದೆ ಅರಸರ ಸೈನ್ಯದಲ್ಲಿ ಸೈನಿಕರಾಗಿದ್ದರು. ಹೆಂಜಾ ನಾಯ್ಕ ಅವರ ಅಜ್ಜ ಲಿಂಗಪ್ಪ ನಾಯ್ಕ ಸಹ ಸೈನ್ಯದಲ್ಲಿದ್ದರು. ಕಾರವಾರದ ಕೋಡಿಭಾಗದ ಈ ಸೈನಿಕ ಕುಟುಂಬ ನಮ್ಮೆಲ್ಲರಿಗೂ ಹೆಮ್ಮೆ’ ಎಂದು ಅವರು ಹೇಳಿದರು.
ಪ್ರಮುಖರಾದ ದೀಪಕ ಕುಡಾಳಕರ್, ನಾಗೇಂದ್ರ ಅಂಚೆಕರ್, ಗುರುದಾಸ್ ನಾಯ್ಕ, ಮದನ್ ಗುನಗಿ, ಮಂಗೇಶ್ ನಾಯಕ, ಸುಜಿತ್ ಮಾಳಶೇಖರ್, ವಿನಯ್ ಕೊಲವೇಕರ್, ದೀಪಕ್ ಲಾಂಜೆಕರ್ ಲೋಕೇಶ್ ನಾಯಕ್ ಇದ್ದರು.