ಯಲ್ಲಾಪುರ: ಕಾಳಮ್ಮನಗರದಲ್ಲಿ ನಡೆದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಿರವತ್ತಿಯ ವಿಠ್ಠು ಶಳಕೆ ನೇತ್ರತ್ವದ ಕಬ್ಬಡ್ಡಿ ತಂಡ ಅಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಕಳೆದ 30 ವರ್ಷಗಳಿಂದ ವಿಠ್ಠು ಶಳಕೆ ಕಬ್ಬಡಿ ಆಡುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದ್ದಾರೆ. ದಸರಾ ಕ್ರೀಡಾಕೂಟದ ಹಿನ್ನಲೆ ತಮ್ಮದೇ ಆದ ತಂಡ ಕಟ್ಟಿಕೊಂಡು ಮೈದಾನಕ್ಕೆ ಇಳಿದ ಅವರು ಪ್ರತಿಸ್ಪರ್ಧಿಗಳನ್ನು ಮಣಿಸಿದರು. ಆ ಮೂಲಕ ಪುರುಷರ ಕಬ್ಬಡಿ ವಿಭಾಗದಲ್ಲಿ ಗೆದ್ದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾದರು.
ಶ್ಯಾಮ ಶಿಂಧೆ, ಧೋಂಡು ಶೆಂಡಗೆ, ಬಾಬು ಶೆಂಡಗೆ, ಕೋಯಾ ಶೆಂಡಗೆ, ಸೋನು ಕೊಕ್ಕರೆ, ತುಕಾರಾಮ ಪಟಕಾರೆ, ಸ್ಟಾಪಿನ್ ಸಿದ್ದಿ, ವಿಟ್ಠಲ ವರಕ, ಭರತ ಕೊಕರೆ, ಲಕ್ಕು ಕೊಕರೆ, ರಾಮು ಕೊಕರೆ ತಂಡದಲ್ಲಿದ್ದು ಗೆಲುವಿಗೆ ಸಹಕರಿಸಿದರು. ಗ್ರಾ ಪಂ ಸದಸ್ಯ ಬಾಪು ತಾಟೆ, ಕ್ರೀಡಾಪಟುಗಳಾದ ಭರತ್ ಕೊಕ್ರೆ, ಲಕ್ಕು ಕೊಕ್ರೆ, ಬಜ್ಜು ತಾಟೆ, ಸಂಜಯ್ ಮಿರಾಸಿ, ಸುನಿಲ್ ಕಾಂಬಳೆ, ಬಾಬು ಸಂಡಗೆ, ಬಮ್ಮು ಬಿಚ್ಚುಕಲೆ ಸ್ಪರ್ಧಾಳುಗಳಿಗೆ ಹುರಿದುಂಬಿಸಿದರು.