`1982ರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ನೆರೆ ಪ್ರವಾಹ ಉಂಟಾಗುತ್ತದೆ. ಆಗ, ನಾವು ಕಾಳಜಿ ಕೇಂದ್ರ ಸೇರಬೇಕು. ನಮ್ಮ ಸಮಸ್ಯೆ ಆಲಿಸುವವರು ಮಾತ್ರ ಯಾರೂ ಇಲ್ಲ’ ಎಂದು ಕೋನಳ್ಳಿ ಕಾಳಜಿ ಕೇಂದ್ರದಲ್ಲಿ ತಂಗಿದ್ದ ನೆರೆ ಸಂತ್ರಸ್ತರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಬಳಿ ಅಳಲು ತೋಡಿಕೊಂಡಿದ್ದಾರೆ.
ಕುಮಟಾ ಬಳಿಯ ಗುಡ್ನಕಟ್ಟು ಹೊಳೆಗೆ ನೆರೆಬಂದು ನಾವು ಮನೆಬಿಟ್ಟು ಕಾಳಜಿ ಕೇಂದ್ರ ಸೇರಬೇಕಾಗುತ್ತದೆ. ಮಳೆಗಾಲದ ಸಮಯದಲ್ಲಿ ಎಲ್ಲರಂತೆ ನಾವು ನಮ್ಮ ನಮ್ಮ ಮನೆಯಲ್ಲಿರಬೇಕು ಎಂದರೆ ಗುಡ್ನಕಟ್ಟು ಹೊಳೆಗೆ ಶಾಶ್ವತ ತಡೆಗೋಡೆ ನಿರ್ಮಿಸಬೇಕು’ ಎಂದು ಅಲ್ಲಿನ ಜನ ಆಗ್ರಹಿಸಿದ್ದಾರೆ.
Discussion about this post