ಕುಮಟಾ: ಹೊಲನಗದ್ದೆಯ ಮಂಗೋಡ್ಲ ರಸ್ತೆಯ ಪಕ್ಕದಲ್ಲಿ ತ್ಯಾಜ್ಯಗಳ ರಾಶಿ ಬಿದ್ದಿದ್ದು, ಸುತ್ತಲಿನ ವಾತಾವರಣ ಗಬ್ಬೆದ್ದಿದೆ. ಈ ಭಾಗದಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯವಾಗಿದೆ.
ರಸ್ತೆ ಅಂಚಿನಲ್ಲಿ ಬಿದ್ದ ತ್ಯಾಜ್ಯ ಸಾಂಕ್ರಾಮಿಕ ರೋಗ ಹರಡುವ ಕೇಂದ್ರವಾಗಿದೆ. ಈ ಬಗ್ಗೆ ದೂರು ಬಂದರೂ ಗ್ರಾ ಪಂ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗಿಲ್ಲ. ಮಳೆಗಾಲದಲ್ಲಂತೂ ಈ ಪ್ರದೇಶ ಇನ್ನಷ್ಟು ಗಬ್ಬೆದ್ದಿದೆ. ತ್ಯಾಜ್ಯ ಕೊಳೆತು ಹುಳ ಹಾರಾಡುತ್ತಿರುವ ವಾತಾವರಣ ನೋಡಿ ಜನ ಅಸಹ್ಯ ಪಡುತ್ತಿದ್ದಾರೆ.
Discussion about this post