ಕುಮಟಾ: `ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಪರಿಕಲ್ಪನೆಯ ಅಡಿ ಕೆನರಾ ಎಕ್ಸಲೆನ್ಸ್ ಪಿ ಯು ಕಾಲೇಜಿನಲ್ಲಿ ಯೋಗಾಭ್ಯಾಸ ಮತ್ತು ಸಭೆ ನಡೆದಿದ್ದು, ಪತಂಜಲಿ ಯೋಗ ಗುರು ನಾಗೇಂದ್ರ ಭಟ್ಟ ಅಚವೆ ಅವರು ಯೋಗ ಪ್ರಾತ್ಯಕ್ಷಿಕೆ ನಡೆಸಿದರು.
ಕೆನರಾ ಎಕ್ಸಲೆನ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ ಜಿ. ಜಿ. ಹೆಗಡೆ ಈ ವೇಳೆ ಮಾತನಾಡಿ, `ಬದುಕಿನಲ್ಲಿ ಸ್ಥಿತಪ್ರಜ್ಞತೆಯನ್ನು ಹೊಂದಲು ಯೋಗ ಸಹಕಾರಿಯಾಗಿದೆ. ಪ್ರತಿನಿತ್ಯ ಯೋಗಾಭ್ಯಾಸ ಮಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರಾಚಾರ್ಯ ಡಿ ಎನ್ ಭಟ್ಟ ಮಾತನಾಡಿ `ಯೋಗ ಎಂಬುದು ವಿಶ್ವಕ್ಕೆ ಭಾರತೀಯರು ನೀಡಿದ ದೊಡ್ಡ ಕೊಡುಗೆ’ ಎಂದರು.
Discussion about this post