ಮನೆಯೊಳಗೆ ಮದ್ಯ ದಾಸ್ತಾನು ಮಾಡಿ ಮನೆ ಮುಂದೆ ಅದನ್ನು ಮಾರಾಟ ಮಾಡುತ್ತಿದ್ದ ಕರಿಯಪ್ಪ ನಾಯ್ಕ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಸಿದ್ದಾಪುರ ತಾಲೂಕಿನ ಕೋಲಸಿರ್ಸಿಯ ಕರಿಯಪ್ಪ ನಾಯ್ಕ ಪೇಟೆಗೆ ಬಂದಾಗಲೆಲ್ಲ ಮದ್ಯ ಖರೀದಿಸಿ ಅದನ್ನು ಮನೆಯಲ್ಲಿ ದಾಸ್ತಾನು ಮಾಡುತ್ತಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಬಿಡುವಿನ ವೇಳೆಯಲ್ಲಿ ಮದ್ಯ ಮಾರಾಟ ಮಾಡಿ ಕಾಸು ಸಂಪಾದಿಸುತ್ತಿದ್ದರು. ಇದರೊಂದಿಗೆ ತಮ್ಮ ಮನೆ ಮುಂದೆ ಮದ್ಯ ಸೇವನೆಗೆ ಮುಕ್ತ ಅವಕಾಶ ಕೊಟ್ಟಿದ್ದರು.
ಫೆ 21ರ ರಾತ್ರಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಹಾಗೂ ಸೇವನೆಯಲ್ಲಿ ತೊಡಗಿದ್ದವರ ಮೇಲೆ ಸಿದ್ದಾಪುರ ಪಿಎಸ್ಐ ಅನೀಲ ಮಾದರ್ ದಾಳಿ ಮಾಡಿದರು. ಮದ್ಯ ಮಾರಾಟಕ್ಕೆ ಅಗತ್ಯ ಪರವಾನಿಗೆ ಕಾಣಿಸುವಂತೆ ಕೇಳಿದರು. ಆಗ ಕರಿಯಪ್ಪ ನಾಯ್ಕ ಯಾವುದೇ ಪರವಾನಿಗೆ ಇಲ್ಲದಿರುವ ಬಗ್ಗೆ ಒಪ್ಪಿಕೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಮದ್ಯ ಮಾರಾಟದಿಂದ ಈ ವೇಳೆ ಸಂಗ್ರಹಿಸಿದ್ದ 160ರೂ ಹಣ ಹಾಗೂ ವಿವಿಧ ಮದ್ಯದ ಪ್ಯಾಕೇಟನ್ನು ಪೊಲೀಸರು ವಶಕ್ಕೆ ಪಡೆದರು.
ದಾಳಿ
ಪಾಸ್ಟಫುಡ್ ಮಳಿಗೆಯಲ್ಲಿ ಸರಾಯಿ ಮಾರಾಟ
ಹೊನ್ನಾವರ ತಾಲೂಕಿನ ಮಂಕಿಯ ಪಾಸ್ಟಫುಡ್ ಮಳಿಗೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಮೇಲಿನ ಇಡಗುಂಜಿಯ ಮಾರುತಿ ನಾಯ್ಕ (34) ಅಕ್ರಮ ಸರಾಯಿ ಜೊತೆ ಸಿಕ್ಕಿ ಬಿದ್ದಿದ್ದಾರೆ. ಮಂಕಿ ಪೊಲೀಸ್ ಠಾಣೆಯ ಪಿಎಸ್ಐ ಭರತಕುಮಾರ್ ಫೆ 22ರಂದು ಕುಳಿಮನೆಯ ಫಾಸ್ಟಪುಡ್ ಅಂಗಡಿ ತಪಾಸಣೆ ನಡೆಸಿದರು. ಅಂಗಡಿ ಹಿಂದೆ ಅಕ್ರಮ ಮದ್ಯ ದಾಸ್ತಾನು ಮಾಡಿರುವುದು ಕಾಣಿಸಿತು. ಅಲ್ಲಿ ಸರಾಯಿ ಕುಡಿಯುತ್ತಿದ್ದ ಮಾರುತಿ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿದರು.