`ಕೊಂಕಣ ರೈಲ್ವೆ ಲಾಭದಲ್ಲಿದೆ. ಅದಾಗಿಯೂ ಸಂಸ್ಥೆ ನಷ್ಟ ಅನುಭವಿಸುತ್ತಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಹೇಳಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಅವರು `ಕೊಂಕಣ ರೈಲ್ವೆ ಶುರು ಮಾಡುವಾಗ ಬೇರೆ ಬೇರೆ ರಾಜ್ಯದಿಂದ ಬಾಂಡ್ ಪಡೆಯಲಾಗಿತ್ತು. ಅದರ ಬಡ್ಡಿಯನ್ನು ಕೊಂಕಣ ರೈಲ್ವೆಯಿಂದ ಪಾವತಿಸಲಾಗುತ್ತಿದೆ. ವ್ಯವಹಾರಿಕ ಚಟುವಟಿಕೆಯಿಂದ ಕೊಂಕಣ ರೈಲ್ವೆ ಲಾಭದಲ್ಲಿದೆ. ಆದರೆ, ಬಡ್ಡಿ ಕೊಡಲು ಸಾಧ್ಯವಾಗದೇ ನಷ್ಠ ಅನುಭವಿಸುತ್ತಿದೆ. ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊಂಕಣ ರೈಲ್ವೆ ಸ್ಥಿತಿ-ಗತಿ ಉತ್ತಮಪಡಿಸಲು ಸಹಕಾರ ನೀಡುವ ಬಗ್ಗೆ ಚರ್ಚೆ ನಡೆದಿದೆ’ ಎಂಬ ವಿಷಯ ಬಹಿರಂಗಪಡಿಸಿದರು. ಕೊಂಕಣ ರೈಲ್ವೆಯನ್ನು ರೈಲ್ವೆ ಇಲಾಖೆ ಜೊತೆ ಸೇರಿಸುವ ಬಗ್ಗೆಯೂ ಚಿಂತನೆ ನಡೆದಿದೆ’ ಎಂದರು.
ಸಾವಿರ ನಿರಾಶ್ರಿತರಿಗೆ ಸಿಕ್ಕಿಲ್ಲ ಪರಿಹಾರ!
ಕೊಂಕಣ ರೈಲ್ವೆಗಾಗಿ ಭೂಮಿ ಕಳೆದುಕೊಂಡ ಸಾವಿರಾರು ನಿರಾಶ್ರಿತರಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ನಿಯಮಾನುಸಾರ ಅವರಿಗೆ ಉದ್ಯೋಗವನ್ನು ಸಹ ನೀಡಲಾಗಿಲ್ಲ. ಈ ಬಗ್ಗೆಯೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಯನ ನಡೆಸಿ, ನಿರಾಶ್ರಿತರ ಪಟ್ಟಿಯನ್ನು ಹೊರ ಹಾಕಿದ್ದಾರೆ. ಅವರೆಲ್ಲರಿಗೂ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
`ಸೀಬರ್ಡ ನಿರಾಶ್ರಿತರ ವಿಷಯದಲ್ಲಿಯೂ ಸಹ ಇದೇ ಬಗೆಯ ಸಮಸ್ಯೆಯಾಗಿತ್ತು. 28ಎ ಆಗದೇ ಇದ್ದವರು ಅತಂತ್ರರಾಗಿದ್ದರು. ಜಿಲ್ಲಾಡಳಿತದಿಂದ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆದಿದ್ದು, ಪರಿಹಾರ ವಿತರಣೆಯಾಗುತ್ತಿದೆ. ಕೊಂಕಣ ರೈಲ್ವೆ ನಿರಾಶ್ರಿತರ ಸಮಸ್ಯೆ ಸಾಕಷ್ಟಿದ್ದು, ಅದನ್ನು ಬಗೆಹರಿಸಲಾಗುತ್ತದೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ಅಸಹಕಾರ!
`ಗೋವಾ ಹಾಗೂ ಮಾಹಾರಾಷ್ಟದಲ್ಲಿನ ರಾಜ್ಯ ಸರ್ಕಾರಗಳು ಕೊಂಕಣ ರೈಲ್ವೆ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದೆ. ದೊಡ್ಡ ಪ್ರಮಾಣದಲ್ಲಿ ಹಣವನ್ನು ನೀಡುತ್ತಿದೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಈವರೆಗೂ ಕೊಂಕಣ ರೈಲ್ವೆ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಕಾರವಾರ, ಉಡುಪಿ, ಮಂಗಳೂರು ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ರಾಜ್ಯ ಸರ್ಕಾರವೂ ಸಹಾಯ ಮಾಡಬೇಕು’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
`ರೈಲ್ವೆಗೆ ಹೆಚ್ಚುವರಿ ಬೋಗಿ ಅಳವಡಿಕೆ, ಅಗತ್ಯವಿರುವ ಕಡೆ ನಿಲುಗಡೆ ಸೇರಿ ವಿವಿಧ ವಿಷಯ ಚರ್ಚೆ ನಡೆದಿದೆ. ಕಾರವಾರದಲ್ಲಿ ನೀರು ಸರಬರಾಜು ಘಟಕ ಸ್ಥಾಪನೆಗೆ ಕೊಂಕಣ ರೈಲ್ವೆ ಆಸಕ್ತಿವಹಿಸಿದೆ. ಇದರಿಂದ ಉದ್ಯೋಗವಕಾಶ ಸೇರಿ ಇನ್ನಷ್ಟು ಅನುಕೂಲವಾಗಲಿದೆ’ ಎಂದರು. `ಭಟ್ಕಳದಿಂದ ಕಾರವಾರದವರೆಗೆ ಮೂಲಭೂತ ಸೌಕರ್ಯ ಕೊರತೆಯಿದ್ದು, ಮುಖ್ಯವಾಗಿ ಕುಮಟಾ ಮತ್ತು ಗೋಕರ್ಣ ಪ್ಲಾಟಫಾರ್ಮ ಮೇಲ್ದರ್ಜಗೆರಿಸಲು ಕ್ರಮ ಜರುಗಿಸಲಾಗಿದೆ’ ಎಂದು ತಿಳಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..