ಕುಮಟಾ: ಕೊಂಕಣ ರೈಲ್ವೆಯಲ್ಲಿ ಒಂದೇ ದಿನ ನಡೆದ ಎರಡು ಕಳ್ಳತನದ ಬಗ್ಗೆ ರೈಲ್ವೇ ಪೊಲೀಸರಿಗೆ ದೂರು ಸಲ್ಲಿಕೆಯಾಗಿದ್ದು, ಆ ದೂರು ತನಿಖೆಗಾಗಿ ಇದೀಗ ಜಿಲ್ಲಾ ಪೊಲೀಸ್ ಘಟಕಕ್ಕೆ ವರ್ಗವಾಗಿದೆ.
ತೆಲಂಗಾಣದ ಸಾಯಿ ರಿತ್ವಿನ್ ಹಾಗೂ ಅದೇ ರಾಜ್ಯದ ಕೋಲಾ ಅನ್ಮಿಶಾ ಎಂಬಾತರು ಈ ದೂರು ನೀಡಿದ್ದಾರೆ. ಅಕ್ಟೊಬರ್ 30ರಂದು ನೇತ್ರಾವತಿ ಎಕ್ಸಪ್ರೆಸ್ಸಿನಲ್ಲಿ ಅವರು ಪ್ರಯಾಣಿಸುತ್ತಿದ್ದಾಗ ಸಾಯಿ ರಿತ್ವಿನ್ ಅವರ ಮೊಬೈಲ್ ಕದ್ದಿದ್ದಾರೆ. 21 ಸಾವಿರ ರೂ ಮೌಲ್ಯದ ವಿವೋ ಮೊಬೈಲ್ ಕಳೆದುಕೊಂಡ ಸಾಯಿ ರಿತ್ವಿನ್ ಅಂದೇ ರೈಲ್ವೇ ಪೊಲೀಸರಿಗೆ ಈ ಬಗ್ಗೆ ದೂರಿದ್ದಾರೆ. ಅದೇ ರೈಲಿನಲ್ಲಿದ್ದ ಕೋಲಾ ಅನ್ಮಿಶಾ ಅವರ 17 ಸಾವಿರ ರೂ ಮೌಲ್ಯದ ಸ್ಯಾಮಸಂಗ್ ಮೊಬೈಲ್’ನ್ನು ಕಳ್ಳರು ಅಪಹರಿಸಿದ್ದಾರೆ.
ಇದನ್ನು ಓದಿ: ಕೊಂಕಣ ರೈಲಿನಲ್ಲಿ ಕಳ್ಳರ ಕಾಟ!
ಇದರೊಂದಿಗೆ ಕೊಂಕಣ ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದ ಮುಂಬೈನ ಮಹ್ಮದ್ ಖಾನ್, ಕೇರಳದ ಸ್ರೀವಸ್ ಹಾಗೂ ಟಿ ಗೀತಾಕುಮಾರಿ ತಮ್ಮ ವಸ್ತುಗಳು ಕಳ್ಳರ ಪಾಲಾದ ಬಗ್ಗೆ ದೂರಿದ್ದಾರೆ.