ಕುಮಟಾ: ಕೆಎಸ್ಆರ್ಟಿಸಿ ಘಟಕದಲ್ಲಿನ ರಬ್ಬರ್ ಟಯರ್, ಸುಟ್ಟ ಆಯ್ಲುಗಳ ಮಿಶ್ರಣಕ್ಕೆ ಅಲ್ಲಿನ ಅಧಿಕಾರಿಗಳು ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಘಟಕದ ಸುತ್ತಲು ದಡ್ಡ ಹೊಗೆ ತುಂಬಿಕೊoಡಿದ್ದು, ಜನ ಉಸಿರಾಟಕ್ಕೆ ಸಹ ಸಮಸ್ಯೆ ಅನುಭವಿಸಿದರು.
ಈ ಬಗೆಯ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿ ನಡೆಸಬೇಕು. ವೈಜ್ಞಾನಿಕ ವಿಲೇವಾರಿಗಾಗಿಯೇ ಪುರಸಭೆ ಸಾಕಷ್ಟು ಶ್ರಮಿಸುತ್ತಿದೆ. ಪುರಸಭೆಯವರಿಗೆ ಮಾಹಿತಿ ನೀಡಿದರೂ ಯಾವುದೇ ಶುಲ್ಕ ಪಡೆಯದೇ ಇಂಥ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಅದಾಗಿಯೂ ಕೆಎಸ್ಆರ್ಟಿಸಿ ಘಟಕದವರು ತ್ಯಾಜ್ಯವನ್ನು ಪುರಸಭೆಗೆ ನೀಡದೇ ಬೆಂಕಿ ಹಚ್ಚುವ ಮೂಲಕ ಜನರ ಆರೋಗ್ಯ ಹದಗೆಡಿಸಿದ್ದಾರೆ.
ಘಟಕದ ಸುತ್ತಲು ಅನೇಕ ವೃದ್ಧರು ವಾಸವಾಗಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರಿದ್ದಾರೆ. ಆದರೆ, ಅವರ ಬಗ್ಗೆ ಕಿಂಚಿತ್ತು ಕಾಳಜಿವಹಿಸದ ನಿಗಮ ನಿಯಮಬಾಹಿರವಾಗಿ ತ್ಯಾಜ್ಯಕ್ಕೆ ಬೆಂಕಿಯಿಡುವ ಕೆಲಸ ಮಾಡಿದೆ. ಈ ಬಗ್ಗೆ ಪ್ರಶ್ನಿಸಿದವರಿಗೂ ಅಲ್ಲಿನವರು ಹಾರಿಕೆ ಉತ್ತರ ನೀಡಿದ್ದಾರೆ.