ಪ್ರಯಾಗರಾಜ್’ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣಿಗಳು ತೆರಳಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಾರದ ಹಿಂದೆ ಕುಂಭಮೇಳಕ್ಕೆ ತೆರಳಿ ಭಕ್ತಿಯ ಸ್ನಾನ ಮಾಡಿದರು. ಅದಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಮ್ಮ ಕುಟುಂಬದವರ ಜೊತೆ ಕುಂಭಮೇಳಕ್ಕೆ ತೆರಳಿದರು. ಇದೀಗ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಅವರು ತಮ್ಮ ಬಂಧು-ಬಳಗದವರೊoದಿಗೆ ಕುಂಭಮೇಳಕ್ಕೆ ತೆರಳಿ ಪುಣ್ಯಸ್ನಾನದಲ್ಲಿ ಭಾಗಿಯಾಗಿದ್ದಾರೆ.
ಇನ್ನೂ, ಉತ್ತರ ಕನ್ನಡ ಜಿಲ್ಲೆಯಿಂದಲೂ ದೊಡ್ಡ ಪ್ರಮಾಣದಲ್ಲಿ ಭಕ್ತರು ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿ ತಾಲೂಕುಗಳಿಂದಲೂ ವಿಶೇಷ ಬಸ್ಸುಗಳು ಪ್ರಯಾಗರಾಜ್’ಗೆ ತೆರಳುತ್ತಿದೆ. ಅಲ್ಲಿ ತೆರಳಿದ ಪ್ರತಿಯೊಬ್ಬರು ಭಕ್ತಿಭಾವದಿಂದ ತ್ರಿವೇಣಿ ಸಂಗಮದಲ್ಲಿ ಮಿಂದೇಳುತ್ತಿದ್ದಾರೆ. ಜೊತೆಗೆ ಅಲ್ಲಿನ ಫೋಟೋಗಳನ್ನು ಸಹ ಅಷ್ಟೇ ಖುಷಿಯಿಂದ ಹಂಚಿಕೊಳ್ಳುತ್ತಿದ್ದಾರೆ.