ಕಾರವಾರ: ಕೋರ್ಟ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ನೀಡಿದ ಕಾಗದ ಪಾತ್ರೆಯಲ್ಲಿ ಅರೆಬಿಕ್ ಭಾಷೆಯಲ್ಲಿ ಬರಹಗಳಿದ್ದು, ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಮುಸ್ಲಿಂ ಸಮುದಾಯದವರು ಅರೆಬಿಕ್ ಭಾಷೆಯನ್ನು ಈ ರೀತಿ ಬಳಸಿರುವ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಷಯವಾಗಿ ಬುಧವಾರ ಸಂಜೆ ಕೆಲ ಕಾಲ ಬೇಕರಿ ಮುಂದೆ ವಾಗ್ವಾದ ನಡೆದಿದೆ. `ತಿನಿಸುಗಳನ್ನು ಹಾಕಿಕೊಡುವ ಪ್ಲೇಟಿನ್ನು ಜನ ಬಳಸಿ ಬಿಸಾಕುತ್ತಾರೆ. ಇದರಿಂದ ಇಸ್ಲಾಂ ಧರ್ಮಕ್ಕೆ ಅವಮಾನ ಆಗುತ್ತಿದೆ’ ಎಂದು ಪೊಲೀಸ್ ಠಾಣೆಗೆ ಜಮಾಯಿಸಿದ ಜನ ದೂರಿದರು. ಈ ಪ್ಲೇಟ್ ತಯಾರಿಸುವ ಕಂಪನಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ವಕ್ಟ್ ಬೋರ್ಡ ಮೂಲಕ ಸರ್ಕಾರವನ್ನು ಆಗ್ರಹಿಸಿದರು.
Discussion about this post