ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಸಲ್ಲಿಕೆಯಾಗಿದ್ದು, ಖದ್ದು ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಬೀದಿಗೆ ಇಳಿದಿದ್ದಾರೆ.
ಸೋಮವಾರ ಸಂಜೆ ಕಾರವಾರದ ಭಾರತೀಯ ನೌಕಾನೆಲೆ ಅಂಚಿನ ಪ್ರದೇಶದಲ್ಲಿ ಅವರು ಸಂಚಾರ ನಡೆಸಿದರು. ವ್ಯಾಪಕ ಮಳೆಯನ್ನು ಲೆಕ್ಕಿಸದೇ ಜನರ ಸಮಸ್ಯೆ ಆಲಿಸಿದರು. ಅಲ್ಲಿ ನಿಂತಿರುವ ನೀರಿನಲ್ಲಿ ಹೆಜ್ಜೆ ಹಾಕಿದ ಅವರ ಬಳಿ ಸ್ಥಳೀಯರು ಸಮಸ್ಯೆಗಳನ್ನು ಹೇಳಿಕೊಂಡರು. ‘ಕಾಲುವೆಗಳನ್ನು ಸರಿಪಡಿಸಿ ನೀರು ಹೊರಹೋಗುವಂತೆ ಮಾಡಿ’ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಜೊತೆಗೆ ‘ಪಂಪ್ ಅಳವಡಿಸಿ ಇಲ್ಲಿನ ನೀರು ಹೊರಹಾಕಿ’ ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಈ ಕುರಿತಾದ ವಿಡಿಯೋ ಇಲ್ಲಿ ನೋಡಿ..
Discussion about this post