ಕಾರವಾರದಿoದ ಯಲ್ಲಾಪುರ ಮಾರ್ಗವಾಗಿ ಇಳಕಲ್ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಮೇಲೆ ಸೋಮವಾರ ಮಧ್ಯಾಹ್ನ ಗುಡ್ಡ ಕುಸಿದಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ.
ಶಿರವಾಡ ರೈಲು ನಿಲ್ದಾಣದಿಂದ 1.5ಕಿಮೀ ಮುಂದಿನ ಮಂದ್ರಾಳಿ ಎಂಬಲ್ಲಿ ಈ ಗುಡ್ಡ ಕುಸಿದಿದೆ. ಮರಗಳಸಹಿತ ಗುಡ್ಡ ರಸ್ತೆಯ ಮೇಲೆ ಬಂದಿದ್ದು, ಮಧ್ಯಾಹ್ನ 1.30ರಿಂದ ಈ ಮಾರ್ಗದ ಎಲ್ಲಾ ವಾಹನ ಸಂಚಾರ ಸ್ಥಗಿತಗೊಂಡಿದೆ. ಸ್ಥಳದಲ್ಲಿ 2 ಜೆಸಿಬಿ ಯಂತ್ರಗಳು ರಕ್ಷಣಾ ಕಾರ್ಯಕ್ಕೆ ಆಗಮಿಸಿದೆ. ಆದರೆ, ಸಂಜೆ 5.45ರವರೆಗೂ ರಸ್ತೆ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕೆಲಸ ಶುರುವಾಗಿರಲಿಲ್ಲ. ಕೆಲಸ ಶುರುವಾದ ನಂತರ ಕನಿಷ್ಟ 8 ತಾಸು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
Discussion about this post