ಕಾರವಾರ: ರಭಸ ಮಳೆಗೆ ಕಾಳಿ ನದಿ ಉಕ್ಕಿ ಹರಿಯುತ್ತಿದ್ದು, ಕದ್ರಾ ಅಣೆಕಟ್ಟು ಭರ್ತಿಯಾಗಿದೆ.
ಕದ್ರಾ ಜಲಾಶಯದ ಗರಿಷ್ಠ ಮಟ್ಟವು 34.50 ಮೀಟರಗಳಾಗಿದ್ದು, ಪ್ರಸ್ತುತ ಜಲಾಶಯದ ಮಟ್ಟವು 29.70 ಮೀಟರ್ ತಲುಪಿದೆ. ಅಣೆಕಟ್ಟಿಗೆ 30 ಸಾವಿರ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರಿನ ಒಳಹರಿವಿದ್ದು, ಯಾವುದೇ ಕ್ಷಣದಲ್ಲಿ ಅಣೆಕಟ್ಟಿನ ಗೇಟುಗಳನ್ನು ತೆರೆಯಬಹುದಾಗಿದೆ. ಹೀಗಾಗಿ ಆ ಭಾಗದಲ್ಲಿ ಯಾರೂ ತೆರಳದಂತೆ ಕದ್ರಾ ಅಣೆಕಟ್ಟಿನ ಅಧಿಕಾರಿಗಳು ಸೂಚಿಸಿದ್ದಾರೆ. ಅಣೆಕಟ್ಟಿನ ತಳಭಾಗದಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅವರು ಹೇಳಿದ್ದು, ತಮ್ಮ ತಮ್ಮ ಮನೆ ಸಾಮಗ್ರಿ ಹಾಗೂ ಪ್ರಾಣಿಗಳ ಜೊತೆ ತೆರಳುವಂತೆ ಸೂಚಿಸಿದ್ದಾರೆ.
Discussion about this post