ಮುoದಿನ ನಾಲ್ಕು ದಿನಗಳವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ವಿಪತ್ತು ನಿರ್ವಹಣಾ ತಂಡದ 50ಕ್ಕೂ ಅಧಿಕ ಸದಸ್ಯರು ಜನರ ಜೀವ ರಕ್ಷಣೆಗೆ ಬರುತ್ತಿದ್ದಾರೆ. ಬೆಂಗಳೂರಿನಿoದ ಜಿಲ್ಲೆಗೆ 2 ವಿಪತ್ತು ನಿರ್ವಹಣಾ ತಂಡ ಈಗಾಗಲೇ ಹೊರಟಿದ್ದು, ಶುಕ್ರವಾರ ಬೆಳಗ್ಗೆ ಅವರು ಕಾರವಾರ, ಕುಮಟಾ ಹಾಗೂ ಅಂಕೋಲಾ ಭಾಗದಲ್ಲಿ ಅವರು ರಕ್ಷಣಾ ಚಟುವಟಿಕೆ ನಡೆಸಲಿದ್ದಾರೆ.
ತುರ್ತು ಸನ್ನಿವೇಶಗಳನ್ನು ಎದುರಿಸುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಎನ್ ಡಿ ಆರ್ ಎಫ್ ತಂಡ ಕಳುಹಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು. ಹೀಗಾಗಿ ಕಾರ್ಯಾಚರಣೆಗೆ ಅಗತ್ಯವಿರುವ ರಕ್ಷಣಾ ಸಾಧನಗಳೊಂದಿಗೆ ತಂಡದ ಸದಸ್ಯರು ಬರುತ್ತಿದ್ದಾರೆ. ಅಘನಾಶಿನಿ ಮತ್ತು ಶರಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ಭಾಗದ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಜಿಲ್ಲಾಡಳಿತ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದು, ಈ ಪ್ರದೇಶಗಳ ಮೇಲೆ ನಿರಂತರ ನಿಗಾವಹಿಸುತ್ತಿದೆ. ಕಾಳಿ ನದಿಯಲ್ಲಿನ ಅಪ್ಪರ್ ಕಾನೇರಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಆ ಭಾಗದವರಿಗೂ ಜಿಲ್ಲಾಡಳಿತ ಸೂಚನೆ ನೀಡಿದೆ.
Discussion about this post