ಕಾರವಾರದ ಚಿತ್ತಾಕುಲದಿಂದ ಕದ್ರಾ ಮುಖ್ಯರಸ್ತೆಗೆ ಹೊಂದಿಕೊoಡಿರುವ ವೇಗಸವಾಡ ರಸ್ತೆಗೆ ವಿವಾದ ಸುತ್ತಿಕೊಂಡಿದೆ. ಈ ರಸ್ತೆ ಅತಿಕ್ರಮಣ ಆಗಿದೆ ಎಂದು ಸಾಹಿತಿ ವಸಂತ ಬಾಂದೇಕರ್ ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಭೂಮಿ ಅಳತೆಗೆ ಬಂದ ನೌಕರರ ಮುಂದೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಳ್ಳಾಟ ನಡೆದಿದೆ.
ಅನೇಕ ವರ್ಷಗಳಿಂದ ಇಲ್ಲಿ 8 ಅಡಿ ಅಗಲದ ರಸ್ತೆಯಿದ್ದು, ಅಕ್ಕಪಕ್ಕದ ಮನೆಯ ಇಬ್ಬರು ಅದನ್ನು ಅತಿಕ್ರಮಿಸಿದ್ದಾರೆ ಎಂಬುದು ವಸಂತ ಬಾಂದೇಕರ್ ಅವರ ದೂರು. ಈ ಬಗ್ಗೆ ಅವರು ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದು, ಭೂ ಮಾಪನಾ ಇಲಾಖೆಯವರು ನ್ಯಾಯಾಲಯಕ್ಕೆ ಸಹ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರಿದಾಗ ಭೂ ಮಾಪನಾ ಇಲಾಖೆಯ ಸಿಬ್ಬಂದಿ ದಾರಿ ಸರ್ವೆಗೆ ಆಗಮಿಸಿದ್ದರು. ಮೋಜಣಿ ಮಾಡಿಸಲು ಬಂದವರಿಗೆ ಅತಿಕ್ರಮಣದಾರರು ಚಪ್ಪಲಿ ತೋರಿಸಿ ನಿಂದಿಸಿದ್ದಾರೆ. ಭೂಮಿ ಅಳೆಯುವುದಕ್ಕೆ ಸಹ ಅಡ್ಡಿಪಡಿಸಿದ್ದಾರೆ ಎಂದು ವಸಂತ್ ಬಾಂದೇಕರ್ ವಿವರಿಸಿದರು.
`ರಸ್ತೆ ಬಂದ್ ಆಗಿರುವುದರಿಂದ ಅನೇಕರಿಗೆ ಅನಾನುಕೂಲವಾಗಿದೆ. ತಕ್ಷಣ ಇದನ್ನು ಬಗೆಹರಿಸಬೇಕು’ ಎಂದವರು ಆಗ್ರಹಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬ0ಧಿಸಿ ಭೂ ಮಾಪನಾ ಇಲಾಖೆಯವರು ಸರ್ವೆ ನಡೆಸಲು ತೆರಳಿದಾಗ ಉಂಟಾದ ತಳ್ಳಾಟದ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಇಲ್ಲಿ ನೋಡಿ..
Discussion about this post