ಭಟ್ಕಳ: ಮುರುಡೇಶ್ವರದಲ್ಲಿ ಪದೇ ಪದೇ ಸಾವು-ನೋವು ಸಂಭವಿಸುತ್ತಿದ್ದು ಇದಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಕಾರಣ ಎಂದು ನ್ಯಾಯವಾದಿ ನಾಗೇಂದ್ರ ನಾಯ್ಕ ದೂರಿದ್ದಾರೆ. ಸಾವು-ನೋವು ತಡೆಯುವಲ್ಲಿ ವಿಫಲರಾದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಎಚ್ ವಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರ ವಿರುದ್ಧ ಅವರು ಪೊಲೀಸ್ ದೂರು ನೀಡಿದ್ದಾರೆ.
`ಕರ್ನಾಟಕ ಪ್ರವಾಸೋದ್ಯಮ ನೀತಿ 2020-25, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಮತ್ತು ವಿಪತ್ತು ನಿರ್ವಹಣಾ ಕಾಯಿದೆ 2005’ನ್ನು ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದವರು ದೂರಿದ್ದಾರೆ. ಡಿ.11ರಂದು ಮುಳಬಾಗಿಲು ಮೊರಾರ್ಜಿ ದೇಸಾಯಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದರು. ಇದರೊಂದಿಗೆ ಅ 6ರಂದು 17 ವರ್ಷದ ಪ್ರಿ-ಯೂನಿವರ್ಸಿಟಿ ವಿದ್ಯಾರ್ಥಿ ಸಾವನಪ್ಪಿದ್ದರು. ಈ ಹಿನ್ನಲೆ ಅವರು ದೂರು ನೀಡಿದ್ದಾರೆ.
`ಪ್ರತಿ ವರ್ಷ ಮುರುಡೇಶ್ವರದ ಜಲಕ್ರೀಡೆಗಳಿಂದ 3.5 ಕೋಟಿ ರೂ ಆದಾಯವಿದೆ. ಆದರೂ ಮೂಲಸೌಕರ್ಯಗಳಿಲ್ಲ’ ಎಂಬುದು ನ್ಯಾಯವಾದಿಯ ಆರೋಪ.