ಹಳಿಯಾಳ: ಎಲೆ ವ್ಯಾಪಾರ ಮಾಡುವ ತೆರಗಾಂವ್ ಅಲ್ತಾಪ ಶೇಖ್ ಮುಂದಾಳತ್ವದಲ್ಲಿ ದುಸುಗಿ ಸೇತುವೆ ಬಳಿ ಇಸ್ಪೀಟ್ ಎಲೆ ಆಟ ನಡೆಯುತ್ತಿದ್ದು, ಪೊಲೀಸರು ಇದಕ್ಕೆ ತಡೆ ಒಡ್ಡಿದ್ದಾರೆ.
ನ 30ರಂದು ಅಲ್ತಾಪ ಶೇಖ್ ಜೊತೆ ಉಳಿದ 9 ಜನ ಸೇರಿ ಅಲ್ಲಿ ಅಂದರ್ ಬಾಹರ್ ಆಡುತ್ತಿದ್ದರು. ಈ ಆಟಕ್ಕಾಗಿ 15700ರೂ ಹಣ ಹೂಡಿದ್ದರು. ಅವರ ಮೇಲೆ ಪಿಎಸ್ಐ ಕುಷ್ಣಗೌಡ ಅರಕೇರಿ ದಾಳಿ ನಡೆಸಿದರು. ಈ ವೇಳೆ ಮೂವರು ಸಿಕ್ಕಿ ಬಿದ್ದಿದ್ದು, ಉಳಿದವರು ಓಡಿ ಪರಾರಿಯಾದರು. ಹಣದ ಜೊತೆ ಇಸ್ಪಿಟ್ ಆಟಕ್ಕೆ ಬಳಸಿದ್ದ ಸಲಕರಣೆಗಳನ್ನು ಪೊಲೀಸರು ವಶಕ್ಕೆ ಪಡೆದರು.
ತೆರಗಾವಿನ ಅಲ್ತಾಪ ಶೇಖ್, ದುಸುಗಿಯ ವ್ಯಾಪಾರಿ ರಾಮು ನವಲಗಿ, ಆಳ್ನಾವರದ ಗೌಂಡಿ ಬಾಬು ಮುಳಗುಂದರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯ ಕದಂ, ಸುಬಾನಿ ಅಂಬೋಳಿ, ಮಹೇಶ ಸುರೋಜಿ, ಮದ್ನಳ್ಳಿಯ ಕರಿಯಪ್ಪ, ಮುತ್ತಲಗಿರಿಯ ಅಕ್ಬರ್, ದುಸಗಿಯ ಕಿರಣ ಕುಂಟ್ರೆ ಹಾಗೂ ಅಣ್ಣಪ್ಪ ನೆವಲಗಿ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೆದಿದೆ.